ಕಿ(ಇ) ಬದಲ್ ಗಯಾ ಇನ್ಸಾನ್

ಕಿ(ಇ) ಬದಲ್ ಗಯಾ ಇನ್ಸಾನ್
ಮೋಸ, ವಂಚನೆ ಮನುಷ್ಯನಷ್ಟೇ ಹಳೆಯದು… ಆದರೆ ಅದರ ರೀತಿ ಕಾಲ ಕಾಲಕ್ಕೆ ಬೇರೆ ಬೇರೆ… ‘ಮೈಯಲ್ಲಾ ಕಣ್ಣಾಗಿರು’- ಎಂಬ ನುಡಿಗಟ್ಟು ಬಂದದ್ದೇ ಇಂಥವರನ್ನು ನೋಡಿಯೇ. ಮೊದಲು ಇಷ್ಟೋಂದು ಪ್ರಕರಣಗಳು ಇರಲಿಲ್ಲ. ಎಲ್ಲೋ ಅಲ್ಲೋ ಇಲ್ಲೋ ಒಂದೊAದು ಪ್ರಕರಣ ಕೇಳುತ್ತಿದ್ದೆವು. ಬಹುಶಃ ರೆಡಿಯೋ, ಟೀವಿ, ಹತ್ತಾರು ದಿನಪತ್ರಿಕೆಗಳಿಲ್ಲದ್ದೂ ಪ್ರಮುಖ ಕಾರಣವಿರಬಹುದು. ಅಂಥ ಪ್ರಕರಣಗಳು ಸ್ಥಾನಿಕ ಮಹತ್ವ ಪಡೆದು, ಒಂದೆರಡು ದಿನಗಳ ವರೆಗೆ ಮಾತ್ರ ಅವರಿವರ ಬಾಯಿಗೆ ಬಿದ್ದು ನೆನಪಿನಾಳಕ್ಕೆ ಸೇರಿ ಕ್ರಮೇಣ ಮರೆಯಾಗಿಬಿಡುತ್ತಿದ್ದವು. ಈಗ ಸುದ್ದಿ ಮಾಧ್ಯಮಗಳು, ವೃತ್ತ ಪತರಿಕೆಗಳು, ಯಾವುದೇ ವಿಷಯವನ್ನು ಕ್ಷಣ ಮಾತ್ರದಲ್ಲಿ ವಿಶ್ವದ ತುಂಬ ಏಕಕಾಲಕ್ಕೆ ಬಿತ್ತರಿಸಿ ಮಿಂಚಿನ ವೇಗದಲ್ಲಿ ಜನಸಮೂಹಕ್ಕೆ ತಿಳಿಸುತ್ತವೆ.
ಈಗ ಇಪ್ಪತೈದು ವರ್ಷಗಳ ಹಿಂದೆ “ಸಂಚಯನಿ” ಎಂಬ ಹಣಕಾಸು ಸಂಸ್ಥೆಯಲ್ಲಿ ನಾನೂ ಹಣ ಕಳೆದುಕೊಂಡಿದ್ದೆ. ಗೆಳತಿಯೊಬ್ಬರ ಅಗ್ರಹಕ್ಕೆ ಮಣಿದು ಮನಸ್ಸಿಲ್ಲದೇ ಮಾಡಿದ ಅನಧಿಕೃತ ಉಳಿತಾಯ ಯೋಜನೆಯಾಗಿತ್ತದು. ನಂತರ ತಾತ್ಕಾಲಿಕವಾಗಿ ಧೀಡೀರ್ ಎಂದು ಗ್ರಹೋಪಯೋಗಿ ಸಾಮಾನುಗಳನ್ನು ಕಡಿಮೆ ದುಡ್ಡಿಗೆ ಕೊಡುವದೇನೋ ಸ್ಕೀಮ್ ಶುರುವಾಗಿ ಹಣ ಕಳೆದುಕೊಳ್ಳುವುದು ಸಾಮಾನ್ಯವಾಯಿತು. ಮೊದಮೊದಲು ಅತ್ಯಂತ ಪ್ರಾಮಾಣಿಕತೆಯಿಂದ ವ್ಯಾಪಾರ ನಡೆಸಿ, ಜನರ ವಿಶ್ವಾಸ ಗಳಿಸಿ ಅವೆಉ ಹೆಚ್ಚು ಹೆಚ್ಚು ಹಣ ಹೂಡಿ ಬೃಹತ್ ಪ್ರಮಾಣದಲ್ಲಿ ಸಂಗ್ರಹವಾದ ಒಂದೆರಡು ದಿನಗಳಲ್ಲಿ ರಾತ್ರೋ ರಾತ್ರಿ ಅಂಗಡಿಗೆ ಬೀಗ ಬೀಳುತ್ತಿತ್ತು. ಭಂಡರು ಧೈರ್ಯವಂತರು, ಗಟ್ಟಿಗರು ಆ ಮನೆ ಬಾಗಿಲ ಕೀಲಿ ಮುರಿದು ಇದ್ದ ಬಿದ್ದ ಸಾಮಾನುಗಳನ್ನು ಮನೆಗೆ ಸಾಗಿಸುವ ಪ್ರಕರಣಗಳೂ ನಡೆದವು. ಬೆಂಗಳೂರಿನAಥ ಮಹಾನಗರಗಳಲ್ಲಂತೂ ಅನಧಿಕೃತ, ಚೀಟಿ ವ್ಯವಹಾರಗಳಿಗೆ ಯಾವುದೇ ಅಂಕುಶವೇ ಇಲ್ಲ. ಯಾವು ಯಾವುದೋ ಮೂಲೆಯಿಂದ ಕನಸುಗಳನ್ನು ಬೆನ್ನೇರಿಸಿಕೊಂಡು ಬಂದ ಬಡ ಕುಟುಂಬಗಳು ಇಂಥವಕ್ಕೆ ಮೊದಲ ಬಲಿ… ತಮ್ಮವೇ ಕಾರಣಕ್ಕೆ ಯಾರಿಗೂ ಹೇಳದೇ ಗಳಿಸಿದ್ದರಲ್ಲಿ ಹೊಟ್ಟೆ ಬಟ್ಟೆ ಕಟ್ಟಿ, ಮುರುಕು ಧರ್ಮ ಶಾಲೆಯಲ್ಲಿ ಒರಗಿ ಕನಸುಕಾಣುವ ತಿರುಕನಂತೆ ಆನೆಯಿಂದ ವರಮಾಲೆ ಹಾಕಿಸಿಕೊಂಡು ಕನಸಿನಲ್ಲಿಯೇ ರಾಜನಾಗಿ ಸುಖಿಸುವ ಬಡಪಾಯಿಗಳಿಗೆ ಎಚ್ಚರವಾದಾಗ ದಂಡೆತ್ತಿ ಬಂದ ಸಶಸ್ತç ಪಡೆಯೇ..
ಯಾವುದೋ ರೀತಿ ಒಬ್ಬರ ಬಳಿ ದೊಡ್ಡ ಮೊತ್ತವಿದೆ ಎಂದು ಗೊತ್ತಾದರೆ ಸಾಕು ಅವರ ಮುಂದೆ ಹತ್ತು, ನೂರು ಬಿಡಿ ನೋಟುಗಳನ್ನೋ, ಹೊಲಸನ್ನೋ ತೋರಿಸಿ ಗಮನ ಬೇರೆಡೆ ಸೆಳೆದು ಹಣ ದೋಚಿ ಪರಾರಿಯಾಗುವವರದು ಮತ್ತೊಂದು ತಂಡ. ಒಚಿಟಿ ಮಹಿಳೆಯರಿಗೆ ಅಭದ್ರತೆ ಭಾವ ಬರಿಸಿ, ಹೆದರಿಸಿ, ಚಿನ್ನಾಭರಣ ದೋಚುವವರದು ಮಗದೊಂದು ಗುಂಪು. ನಿಶ್ಚಿತ ಅವಧಿಯಲ್ಲಿ ದುಪ್ಪಟ್ಟು ಹಣದ ಆಸೆ ತೋರಿಸುವ ವಂಚನೆಯ ಜಾಲವೂ ಸಣ್ಣದೇನಿಲ್ಲ. ಗೆಳೆತನದ ನಾಟಕವಾಡಿ ಒಳ್ಳೆ ರೀತಿಯಲ್ಲೇ ಸಾಲ ಪಡೆದು ಕೊಟ್ಟ ಸಾಲ ಗುಳುಂ ಮಾಡುವದಕ್ಕೂ ಸಾಕಷ್ಟು ಹಳೆಯ ಇತಿಹಾಸವಿದೆ.
ನನಗೆ ಅಚ್ಚರಿಯನಿಸುವದು ಜನರು ಹಣದ ಆಮಿಷಕ್ಕೆ ಬಲಿಯಾಗಿ “ಆ ಬೈಲ್ ಮುಝೆ ಮಾರ್” ಎಂದು ತಾವೇ ವಂಚಕರಿಗೆ ಹಗ್ಗ ಕೊಟ್ಟು ಕೈ ಕಟ್ಟಿಕೊಳ್ಳುವದು. ತಿಳಿದವರೇನಾದರೂ ನಾಲ್ಕು ಎಚ್ಚರಿಕೆ ಮಾತು ಹೇಳಿದರೆ ನಂಬದಿರುವದು ಅವರ ದಡ್ಡತನವೋ.. ಅವರ ಕೆಟ್ಟ ನಸೀಬವೋ ಅರ್ಥವಾಗುವುದಿಲ್ಲ.
ಉರಿವ ಕೆಂಡ ತನ್ನನ್ನು ಕೈಯಲ್ಲಿ ಹಿಡಿದವರು ಗೊತ್ತಿಲ್ಲದೇ ಹಿಡಿದ ಅಮಾಯಕರೇ/ ಅಲ್ಲವೇ ಎಂದು ನೋಡಿ ಸುಡುವದಿಲ್ಲ. ಸುಡುವದೇ ಅದರ ಗುಣಧರ್ಮ. ಎಚ್ಚರವಿರಬೇಕಾದವರು ನಾವು.
ಮೂರನೇಯವರಾಗಿ ಮಾತನಾಡುವದು ಸುಲಭ. ಎಲ್ಲರಿಗೂ ಎಲ್ಲ ವಿವೇಚನೆ ಇದ್ದರೆ ಇಂಥ ಘಟನೆಗಳ ಪುನರಾವರ್ತನೆ ಖಂಡಿತ ಆಗುವುದಿಲ್ಲ. ಆಗುತ್ತಿವೆ ಎಂದಮೇಲೆ ನಾವೆಲ್ಲೋ ತಪ್ಪೀದ್ದೇವೆ. ಅಂತೆಯೇ ಒಮ್ಮಿಲ್ಲ ಒಮ್ಮೆ ಎಲ್ಲರ ವಿಷಯಗಳಲ್ಲೂ ಇಂಥ ಪ್ರಮಾದಗಳು ಮರುಕಳಿಸುತ್ತಲೇ ಇವೆ. ಸ್ಮಾಶಾನ ವೈರಾಗ್ಯ, ಪ್ರಸವ ವೈರಾಗ್ಯ, ಅಭಾವ ವೈರಾಗ್ಯ ಅಭಾವ ವೈರಾಗ್ಯಗಳಂತೆ ಆ ಹೊತ್ತಿಗೆ ಬುದ್ದೀ ಬಂದAತಾಗಿ ಕ್ರಮೇಣ “ಎಲ್ಲಿದ್ದೀಯೋ ರಂಗ ಅಂದರೆ.. ಮೊದಲು ಇದ್ದಲ್ಲೇ” ಅನ್ನುವ ಹಂತಕ್ಕೆ ನಾವಿರುವ ವರೆಗೂ ಬಹಳಷ್ಟು ಬದಲಾವಣೆ ಆಶಿಸುವಂತಿಲ್ಲ.
ನಿನ್ನೆ ನಡೆದ ಒಂದು ಬೃಹತ್ ಹಗರಣದ ಸುದ್ದಿ ಓದಿ, ಕಂಗೆಟ್ಟ ಜನರನ್ನು ನೋಡಿದಾಗ ಇಷ್ಟೆಲ್ಲ ನೆನಪಾಯಿತು.

Leave a Reply