ಮರದ ಮನೆ…!

ಮರದ ಮನೆ…!

ಪ್ರಕೃತಿಯ ಮಡಿಲಲ್ಲಿ ಮರದ ಮೇಲಿನ ಮನೆಯನೇರಿ ಕಾಲ ಕಳೆಯುವುದು ಅದ್ಭುತ ಅನುಭವ. ಹಕ್ಕಿಗಳ ಚಿಲಿಪಿಲಿ ನಾದದ ಜೊತೆಗೆ ತಂಪಾದ ಗಾಳಿ, ಬೆಳದಿಂಗಳು, ಸೂಯೋದಯದ ಸೊಬಗಿನ ಕ್ಷಣವನ್ನು ಮನದಣಿಯೆ ಆಸ್ವಾದಿಸಲು ಮರದ ಮನೆ ಹೆಚ್ಚು ಸೂಕ್ತ. ಅಪರೂಪ ಎನ್ನುವಂತಿರುವ ಇದು ತನ್ನ ವಿಶೇಷ ವಿನ್ಯಾಸದಿಂದ ಗಮನ ಸೆಳೆಯುತ್ತದೆ. ಈ ಟ್ರೀ ಹೌಸ್ ಇರುವುದು ಶಿಕಾರಿಪುರದಿಂದ ಮೂರು ಕಿಲೋಮೀಟರ್ ದೂರದ ಇಕ್ಬಾಲ್ ಅಹಮದ್ ರವರ ತೋಟದ ಮನೆಯಲ್ಲಿ ನಟರೂ ನಾಟಕಕಾರರೂ ಆಗಿರುವ ಇವರ ಕೈ ಚಳಕದಿಂದ ಹಸಿರ ಪರಿಸರದಲ್ಲಿ ಕಡಿಮೆ ವೆಚ್ಚದಲ್ಲೇ ವಿನ್ಯಾಸ ಮಾಡಲಾಗಿದೆ. ಇಕ್ಬಾಲ್ ರವರು ತಮ್ಮ ತೋಟದಲ್ಲಿ ವಸತಿಗೆ ಕಲಾತ್ಮಕ ಮನೆಯನ್ನಲ್ಲದೇ ರಂಗಮಂದಿರವನ್ನೂ ನಿರ್ಮಾಣ ಮಾಡಿದ್ದಾರೆ. ಜಾನಪದ ಸಂಸ್ಕೃತಿ ನೆನಪಿಸುವ ಹಲವು ಪರಿಕರಗಳು ಇಲ್ಲಿವೆ.

ಹೊಸ್ಮನೆ ಮುತ್ತು

Leave a Reply