ಮತ್ತೆ ಅಮ್ಮನನ್ನು ಕಂಡ…!

ಮತ್ತೆ ಅಮ್ಮನನ್ನು ಕಂಡ…!
ಬೇಡ ಅದು ಚೆನ್ನಾಗಿಲ್ಲ ನನಗೆ ಈ ಫ್ರಾಕೇ ಬೇಕು ಇದು ಆರು ವರ್ಷದ ಮಗಳ ಹಠ ಬದುಕಿನ ಪ್ರೀತಿ ಮತ್ತು ಬದುಕುವ ಪ್ರೀತಿಗೆ ಆತುಕೊಳ್ಳುವಂತೆ ಮಾಡಿದ ಆದ್ರ್ರ ಮನಸಸ್ಸಿನ ಪ್ರತಿರೂಪ ಕೂಸು ಅವಳು ಈ ಮಗಳನ್ನೊಮ್ಮೆ ಸುತ್ತಾಡಿಸಿಕೊಂಡು ಬರೋಣ ಅಂತ ತಂದೆ ಎಕ್ಸಿಬಿಷನ್ ಒಂದಕ್ಕೆ ಕರೆದುಕೊಂಡು ಹೋಗಿದ್ದ ಹೀಗೆ ಸುತ್ತಾಡುವಾಗ ಅಲ್ಲಿ ನೇತುಹಾಕಿದ್ದ ಫ್ರಾಕೊಂದು ಆಕೆಯ ಕಣ್ಮನ ಸೆಳೆಯಿತು ಮಗಳು ಆಸೆಯ ಕಣ್ಗಗಳಿಂದ ಗಮನಿಸುತ್ತಿದ್ದುದನ್ನು ಕಂಡರೂ ಕಾಣದಂತಿದ್ದ ಆತ.
ಮಗಳು ಅಪ್ಪಾ ಅಲ್ಲಿ ಆ ಫ್ರಾಕು ಎಂದು ಅದರೆಡೆಗೆ ತನ್ನ ಪುಠಾಣಿ ಬೆರಳು ಚಾಚುತ್ತಾ ಜಗ್ಗಿದಳು ತೆರಲಾರದ ದುಬಾರಿ ಬೆಲೆಯದ್ದು ಎಂಬುದು ಅವನ ಸಂಕಟ. ಅವಳ ಸಮಾಧಾನಕ್ಕೆಂದು ತನ್ನಲ್ಲಿ ದುಡಿಲ್ಲವೆಂದು ಏನೇನೋ ಆಟ ಕಟ್ಟಿದ, ಕಡಿಮೆ ಬೆಲೆಯ ಫ್ರಾಕಿನತ್ತ ಗಮನ ಸೆಳೆದು ಅದರ ಅಂದ ಚೆಂದ ವರ್ಣಿಸತೊಡಗಿದ ಆಕೆಯದು ಒಂದೇ ಬೇಡಿಕೆ ಅದೇ ಬಣ್ಣ ಅದೇ ಫ್ರಾಕು ಊ… ಹೂ.. ಐಸ್ ಕ್ರೀಂ, ಚಾಕಲೇಟ್ ಆಸೆ ಆಮಿಷಗಳಿಗೆ ಒಲಿಯದ ಆಕೆಯ ಮುಖದ ಮೇಲಿನ ಬೇಡಿಕೆಯ ಚಿಹ್ನೆ ಮಾಸಿರಲಿಲ್ಲ . ತಾನು ಸಹ ಹಿಂದೆ ಜಾತ್ರೆಯಲ್ಲಿ ಅಮ್ಮನ ಬಳಿ ಹೀಗೆಯೇ ಆಟಿಕೆ ಬೇಕೆಂದು ಹಠ ಹಿಡಿದ ನೆನಪು ಬೇಡವೆಂದರೂ ಕಣ್ಮುಂದೆ ಸುರುಳಿಯಾಗಿ ಬಿಚ್ಚಿಕೊಳ್ಳತೊಡಗಿತು ಎಳೆಯ ಮನಸ್ಸು ಘಾಸಿಗೊಳಿಸುವುದು ತರವಲ್ಲವೆಂದು ಅವಳ ಇಷ್ಟದ ಫ್ರಾಕನ್ನೇ ಕೊಂಡು ತಂದೆ, ಮಗುವಿನ ಮುಖದ ಮೇಲೆ ಮುಗ್ಧತೆಯ ಸಹಜ ನಗುವೊಂದು ಕಿಲಿಕಿಲಿಸಿತು. ನಗು ಸಾಂಕ್ರಾಮಿಕವಲ್ಲವೆ? ಆತನೂ ಅಷ್ಟು ಹಗುರಗೊಂಡವನಾದ.
ಮರುದಿನ ಎಂದಿನಂತೆ ಮುಂಚೆ ಅದೇ ಫ್ರಾಕು ತೊಟ್ಟು ಶಾಲೆಗೆ ಹೊರಟುನಿಂತ ಮಗಳ ಸಂಭ್ರಮ ಕಂಡು ಮನ ಆನಂದದ ಕಡಲು. ಆಕೆಯನ್ನು ಶಾಲೆಯ ಬಳಿ ಬಿಟ್ಟು ಇನ್ನೇನು ಹೊರಡಬೇಕೆಂದು ಮನೆಯತ್ತ ಬೈಕು ತಿರುಗಿಸಿದರೆ ಶಾಲಾ ಆಯಾಳ ಕೂಗು, ಶಾಲಾ ಆವರಣದಿಂದ ತನ್ನತ್ತ ಓಡಿಬರುವ ಮಗಳ ಕಂಡು ಅಪ್ಪನಿಗೂ ಗಾಬರಿ.
ಪುಠಾಣಿ ಹೆಜ್ಜೆ ಹಾಕುತ್ತ ಬಂದ ಆಕೆ ಆದ್ರ್ರ ನೋಟ ಬೀರುತ್ತ ಅಪ್ಪನ ಕತ್ತು ಹಿಡಿದು ಬಗ್ಗಿಸಿ ಕಿವಿಯಲ್ಲಿ ಮೆಲುದನಿಯಿಂದ “ಅಪ್ಪಾ ನಿನ್ನೆ ಫ್ರಾಕು ತೆಗೆದುಕೊಳ್ಲುವಾಗ ನಿನ್ನ ಬಳಿ ದುಟ್ಟಿಲ್ಲ ಅಂದ್ಯಲ್ಲ ಇವತ್ತು ನಿನ್ನತ್ರ ದುಡ್ಡಿದಡಯಾ…?” ಅಂತ ಜೇಬು ತಟ್ಟಿ ಮುದ್ದು ಮುದ್ದಾಗಿ ಆತನ ಸಂಕಟದ ಪರಿಸ್ಥಿಯನ್ನು ಅರ್ಥ ಮಾಡಿಕೊಂಡಂತೆ ಕಕ್ಕುಲಾತಿಯಿಂದ ಪ್ರಶ್ನಿಸಿದಳು ಅಂತಃಕರಣ ಕಲುಕುವ ಅನುಭವ ಮಗಳಲ್ಲಿ ಅಮ್ಮನ ಮಮತೆಯ ಸೆಲೆ ಚಿಮ್ಮಿದ್ದು ಕಂಡು ಕಣ್ಣಲ್ಲಿ ಒಂದು ತೆರೆ ನೀರು ಕಣ್ಣಂಚಿನಲ್ಲಿ ಜಿನುಗುತ್ತಿದ್ದ ಆನಂದಬಾಷ್ಪಗಳನ್ನು ಆಕೆಗೆ ಕಾಣದಂತೆ ಒರೆಸಿಕೊಂಡ ಅವಳ ಮಾತೃ ಹೃದಯದ ಅಕ್ಕರೆಯು ಅಂತ್ಯವೇ ಇಲ್ಲದ ಸಮುದ್ರದಂತೆ ಹರಡಿಕೊಂಡಿತ್ತು.
ಹೊಸ್ಮನೆ ಮುತ್ತು

Leave a Reply