ಮಿಠಾಯಿ ಗೊಂಬೆ….!

ಮಿಠಾಯಿ ಗೊಂಬೆ….!
ಚಾಕೋಲೇಟ್, ಕುರುಕುರೆ, ಲೇಸ್ ಗಾಲ ಅಬ್ಬರದಲ್ಲಿ ಹಿಂದೆ ಶಾಲೆ, ಸಂತೆಗಳ ಬಳಿ ಕಾಣಸಿಗುತ್ತಿದ್ದ ಮಿಠಾಯಿ ಗೊಂಬೆ. ನೇಪಥ್ಯಕ್ಕೆ ಸರಿದಿದೆ. ಗೊಂಬೆಗೆ ಅಳವಡಿಸಿದ ಕೋಲಿನ ವಿಶೇಷ ರುಚಿಯ ಈ ಮಿಠಾಯಿ ಇತ್ತೀಚಿಗೆ ರಾಜಾಜಿನಗರದ ರೇಣುಕಾಚಾರ್ಯ ಹೈಸ್ಕೂಲಿನ ಮುಂದೆ ಕಂಡು ಬಂದಿತು. ಮಿಠಾಯಿ ಗೊಂಬೆ ನೋಡುವುದೇ ಚಂದ. ಅಲಂಕಾರ ಮಡಿದ ಮುದ್ದಾದ ಗೊಂಬೆಯನ್ನು ಕೋಲಿಗೆ ಸಿಕ್ಕಿಸಿ ಬಹುದೂರದವರೆಗೂ ಕಾಣುವಂತೆ ಮಾಡಿ ಮಕ್ಕಳನ್ನು ಆಕರ್ಷಿಸುತ್ತಾರೆ. ಮಿಠಾಯಿಯತ್ತ ಮಕ್ಕಳ ಗಮನ ಸೆಳೆಯಲು ಮಾಡಿಕೊಂಡ ತಂತ್ರಗಾರಿಕೆ ಯಂತೂ ಇನ್ನೂ ಆಸಕ್ತಿಕರ. ಗೊಂಬೆಯ ಕೈಯಲ್ಲಿರುವ ದೊಡ್ಡದಾದ ತಾಳಗಳಿಗೆ ಹೊಂದಿಕೊಂಡಂತೆ ಗೊಂಬೆಯ ಹಿಂಭಾಗದಲ್ಲಿರುವ ಕೀಳು ಎಳೆದರೆ ಸಾಕು ಎರಡು ಟಾಲಾ ಒಂದಕ್ಕೊಂದು ಸೇರಿ ಸದ್ದಾಗುತ್ತದೆ. ಈ ವಿಭಿನ್ನ ಮಾರಾಟದ ವೈಖರಿ ಮಿಠಾಯಿ ಕೊಳ್ಳುವವರನ್ನು ಆಕರ್ಷಿಸುತ್ತವೆ. ಸಕ್ಕರೆ ಎಳೆ ಬಾರಕ್ಕೆ ಹಲವಾರು ಬಣ್ಣಗಳನ್ನು ಮಿಶ್ರ ಮಾಡಿ ತಯಾರಿಸಲಾದ ಮಿಠಾಯಿಯನ್ನು ಗೊಂಬೆ ಕೋಲಿಗೆ ಅಂಟಿಸಲಾಗುತ್ತದೆ. ಈ ಅಂಟಿನ ಮಿಠಾಯಿಯನ್ನು ಬಿದಿರಿನ ಕಡ್ಡಿಗೆ ಸುತ್ತಿ ಬೇಕಾದ ಆಕಾರ ಮಾಡಿ ಕೊಡುವ ರೀತಿಯೂ ಸೃಜನಶೀಲವಾಗಿರುತ್ತದೆ. ಕ್ಷಣ ಮಾತ್ರದಲ್ಲಿ ವಿಭಿನ್ನ ಆಕೃತಿಯಲ್ಲಿ ಮಿಠಾಯಿಯನ್ನು ಮಕ್ಕಳ ಮೆಗೈ ಹಾಗೂ ಬೆರಳಿಗೆ ಅಂಟಿಸುವ ಕಲಾತ್ಮಕ ವಿಶಿಷ್ಟ ವಾದುದು. ಆಧುನಿಕ ಕಾಲದ ಚಾಕೋಲೇಟ್, ಜಂಕ್ ಫುಡ್ ಗಳ ಅಬ್ಬರದಲ್ಲಿ ಸಾಂಪ್ರದಾಯಿಕ ಮಿಠಾಯಿಯ ಕಾಲ ಮುಗಿದು ಹೋಗಲಿದೆ. ಬಾಲ್ಯವನ್ನು ನೆನಪಿಸುವ ಈ ಅಪರೂಪದ ಮಿಠಾಯಿ ಬಾಲೆ ಸೈಕಲ್ ಬಿಟ್ಟು ಮೋಟಾರ್ ಸೈಕಲ್ಲೇರಿ ಹೊರಟಿದ್ದಾಳೆ.
ಹೊಸ್ಮನೆ ಮುತ್ತು

Leave a Reply