ಮೌಲ್ಯ ಮಾಪನ ಬಗೆ ಹರಿಯದ ಜಿಜ್ಞಾಸೆ

ಮೌಲ್ಯ ಮಾಪನ ಬಗೆ ಹರಿಯದ ಜಿಜ್ಞಾಸೆ
ಅಂದು SSLC ಪರಿಣಾಮ ಬಂದಿತ್ತು result sheet ಎದುರಿಟ್ಟು ಕೊಂಡು ಕೂತ ಮುಖ್ಯಾಧ್ಯಾಪಕರು ನನಗೊಂದು ಪ್ರಶ್ನೆ ಕೇಳಿದರು:
“ಏನು ಟೀಚರ್ SSLC ಮಕ್ಕಳು core subjects ಗಳಲ್ಲಿ 90/95 ರ ಮೇಲೆ ಆರಾಮಾಗಿ ತಗೊಳ್ತಾರೆ? ಇಂಗ್ಲಿಷನಲ್ಲಿ ಅದ್ಯಾಕೆ ಸಾಧ್ಯವಾಗುತ್ತಿಲ್ಲ?”
“ಸರ್ ಅದು ಭಾಷೆ. ಗಣಿತ, ವಿಜ್ಞಾನಗಳಂತೆ ಅಲ್ಲ. ಸಿದ್ಧಾಂತ, ಪ್ರಮೇಯ, ಚಲನೆಯ ಸಿದ್ಧ ನಿಯಮಗಳಿರುವದಿಲ್ಲ 2+2 ಜಗತ್ತಿನ ಯಾವ ಮೂಲೆಗೆ ಹೋದರೂ ನಾಲ್ಕೇ ಉತ್ತರ. ನ್ಯೂಟನ್ ಚಲನೆಯ ನಿಯಮಗಳು, ಜ್ಯಾಮಿಟ್ರಿಯ ಪ್ರಮೇಯಗಳು ಬದಲಾಗುವದಿಲ್ಲ. ಆದರೆ ಭಾಷೆ ಅನಂತ. ತಾಯಿಯ ಮೇಲೆ ಒಂದು ಪರಿಚ್ಛೇದ ಬರೆಯ ಹೇಳಿದರೆ ಒಬ್ಬರಂತೆ ಇನ್ನೊಬ್ಬರು ಖಂಡಿತ ಬರೆಯುವದಿಲ್ಲ. ಅಷ್ಟೇ ಏಕೆ, ಒಬ್ಬನೇ ವಿದ್ಯಾರ್ಥಿ ಎರಡು ಸಲ ಬರೆದರೂ ಭಿನ್ನವಾಗಿಯೇ ಬರೆಯುತ್ತಾನೆ. ಅಲ್ಲಿ ಅಂದರೆ ಭಾಷೆಗಳ ವಿಚಾರದಲ್ಲಿ ಸದಾ change for better ಸಾಧ್ಯವಿದೆ. ಉದಾ: beauty/ look ಗೆ ವಿಶೇಷಣ ಬೇಕಾದರೆ ಅಕ್ಷರಕ್ಕೊಂದು ಪರ್ಯಾಯ ಪದ ಕೊಡಬಹುದು.
A – awesome
B – beautiful
C – charming
D – dazzling
E – eye catching
F – fascinating
G – good looking…

ಹೀಗೆ…. ಈ ಅವಕಾಶ ಭಾಷೆಗಳನ್ನು ಹೊರತು ಪಡಿಸಿ ಉಳಿದ ವಿಷಯಗಳಿಗಿಲ್ಲ. ವಿಷಯ ವ್ಯಾಪ್ತಿ, ಪ್ರಸ್ತಾವನೆ, ಗುಣಗಳಿಗೆ ತಕ್ಕ ವಿಷಯ ಪ್ರಸ್ತಾಪ,ಬರಹದ ಚಿಹ್ನೇಗಳ ಸೂಕ್ತ ಸರಿಯಾದ ಬಳಕೆ ಏನೆಲ್ಲ ಉಂಟು. ಅಲ್ಲದೇ ಭಾಷೆಗಳಿಗೆ stagnation ಇಲ್ಲವೇ ಇಲ್ಲ. ಅದು ಚೈತ್ರ ಪಲ್ಲವದಂತೆ ನಿತ್ಯ ಹರಿದ್ವರ್ಣ. ಒಂದೇ ಮಾತು, ಸ್ವತಃ ಕಲಿಸಿದ ಗುರುಗಳೂ ತಮಗೆ ತಾವೇ ಪೂರ್ಣ ಅಂಕಗಳನ್ನು ಕೊಟ್ಟು ಕೊಳ್ಳಲಾರರು/ ಕೊಟ್ಟುಕೊಳ್ಳ ಬಾರದು…
ಇಷ್ಟು ಹೇಳಿದಾಗ ಮುಖ್ಯಾಧ್ಯಾಪಕರು ಹೌದೆಂದು ತಲೆ ಹಾಕಿದರು. ಆದರೆ ಮುಂದೆ ಕೆಲವೇ ವರ್ಷಗಳಲ್ಲಿ ಇಂಗ್ಲೀಷಿಗೂ 97/98 ಬೀಳತೊಡಗಿದವು. ಅದೇ ಶಿಕ್ಷಕರು, ಅದೇ ವಿದ್ಯಾರ್ಥಿ ವೃಂದ, ಅವೇ ಪರಿಕ್ಷೇಗಳು. ಆದರೆ ಪ್ರಶ್ನೆ ಪತ್ರಿಕೆಗಳಲ್ಲಿ ದೀರ್ಘ ಉತ್ತರಗಳ ಬದಲಿಗೆ, objective type ಹೆಚ್ಚಾಯಿತು. ಬರೆಯುವಲ್ಲಿ ವಿಚಾರ ಮಾಡಬೇಕಾದ ಪ್ರಮೇಯವೇ ಇಲ್ಲದಂತೆ copy/ dictation ಸುಲಭವಾಗುವ ರೀತಿ ಹೆಚ್ಚಾಯಿತು. ನರ್ಸರಿಯಂಥ ಪ್ರಾಸ ಕೇಳಿದ ಪದಗಳಿಗೂ ಪ್ರಶ್ನೇ ಪತ್ರಿಕೆಯಲ್ಲಿ ಮಾದರಿ ಉತ್ತರಗಳು !
Beat_ heat/ seat…
ಹೀಗೆ… ಬಹುಶಃ ಆಂಗ್ಲ ಭಾಷೆಯಿಂದಾಗಿ ಆಗಬಹುದಾದ SSLC ಪರಿಣಾಮದ ಕುಸಿತ ತಡೆಯು ಕ್ರಮವಿತ್ತೋ ಏನೋ… ಕಾರಣವೇನೇ ಇರಲಿ ಶಿಕ್ಷಕರಿಗೆ ಸಮಾಧಾನವಾಗುವಂತೆ ಪರಿಣಾಮ ಬರಲು ಇದರಿಂದ ಸಾಧ್ಯವಾಯಿತು. ನನ್ನ 85 ನೇ ವರ್ಷದಲ್ಲಿ ನಿವೃತ್ತಿಯಾಗುವ ಮೊದಲು ಆರೇಳು ವರ್ಷಗಳಲ್ಲಿ ನನ್ನ ವಿದ್ಯಾರ್ಥಿಗಳೂ, ನನ್ನ ಕಲಿಸುವ ಕ್ರಮ ಬದಲಾಗದಿದ್ದಾಗಲೂ ದಂಡಿಯಾಗಿ 97/98 ಪಡೆದು ಶಿಕ್ಷಕರಿಗೂ/ ಶಾಲೆಗಳಿಗೂ ಕೀರ್ತಿ ತಂದರು.
ಅದರೆ ಒಂದು ಮಾತು… ನಂತರದಲ್ಲಿ ಒಮ್ಮೆಲೇ ಬದಲಾಗುವ/ ಕಠಿಣವೂ ಆಗುವ PUC ಪರೀಕ್ಷೆಗಳಲ್ಲಿ ನಿಜವಾದ ಜಾಣ ವಿದ್ಯಾರ್ಥಿಗಳನ್ನು ಹೊರತು ಪಡಿಸಿ ಕಡಿಮೆ ಅಂಕ ಪಡೆಯುವ/ ಅನುತ್ತೀರ್ಣ ರಾಗುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಸ್ಥಿತ್ಯಂತರ ಕಾಣತೊಡಗಿ ವಿದ್ಯಾರ್ಥಿಗಳ ಆತ್ಮ ಸ್ಥೈರ್ಯ ಕುಸಿದು ಹೋಗುವ ಪ್ರಸಂಗಗಳು ಹೆಚ್ಚಾದವು.
ಸರಿಯಾದ ಮೌಲ್ಯಮಾಪನವಾಗದ, ಕಾಪಿ ಮಾಡಿ ಅಂಕಗಳನ್ನು ಪಡೆಯಲು ಸುಲಭವಾಗುವ ಪರೀಕ್ಷಾ ಪದ್ಧತಿಯಿದು. Examination is a necessary evil ಎಂಬ ಮಾತಿದೆ. ಗ್ರಾಮೀಣ ಮಕ್ಕಳಿಗೆ ಈ ಪದ್ಧತಿ ಸುಲಭವಾಗಿ ಪಾಸಾಗಲು, ಅನುಕೂಲ ಕರವಾಗಿದೆ ಎಂಬಲ್ಲಿ ಎರಡು ಮಾತಿಲ್ಲ. ಒಂದು pass/ fail ಮಗುವಿನ ಭವಿಷ್ಯಕ್ಕೆ ಮಾರಕವಾಗಲೇ ಬಾರದು. ಈ ದೃಷ್ಟಿಯಿಂದ ಒಬ್ಬರ food ಇನ್ನೊಬ್ಬರಿಗೆ poison. ಬೇರೆ ಹಾದಿಯಿಲ್ಲ.
Heterogeneous class room ಗಳಲ್ಲಿ ಇವಕ್ಕೆಲ್ಲ ಸುಲಭ ಪರಿಹಾರಗಳಿರುವುದಿಲ್ಲ ಪರಿಸ್ಥಿತಿಯ ಕೈಗೊಂಬೆಯಾಗಿಯೇ ಎಲ್ಲವನ್ನೂ ನಿಭಾಯಿಸ ಬೇಕಾಗುತ್ತದೆ. ಆದರೆ ಸಾಧಾರಣ ಮಕ್ಕಳಂತೆ, ನಿಜವಾದ ಮೇಧಾವಿ ಮಕ್ಕಳಿಗೂ ತಮ್ಮ ಮಿತಿಯರಿಯುವಂತೆ ಮೌಲ್ಯ ಮಾಪನ ಮಾಡುವದು, ಕನಿಷ್ಠ ಭಾಷೆಗಳಿಗಾದರೂ ಕೆಲ ಅಂಕಗಳನ್ನು ತಡೆ ಹಿಡಿಯುವದು ಮಕ್ಕಳ ಹಿತದೃಷ್ಟಿಯಿಂದ ಸೂಕ್ತ ವೆನಿಸುವದಿಲ್ಲವೇ?
ನಿನ್ನಿನ ಫಲಿತಾಂಶದ ನಂತರದ ವಿವಿಧ post ಗಳನ್ನು ಕಂಡಾಗ ಇಷ್ಟಾದರೂ ಹೇಳಬೇಕೆನಿಸಿತು.

Leave a Reply