ಪಾತಾಳ ಗರಡಿ

ಅಪರೂಪದಲ್ಲೇ  ಅಪರೂಪ  ಎನ್ನಬಹುದಾದ  ಈ  ಪರಿಕರಕ್ಕೆ  ಪಾತಾಳ  ಗರಡಿ  ಎನ್ನುವರು. ತೆರೆದ  ಬಾವಿಯಿಂದ ನೀರೆತ್ತುವಾಗ  ಕೆಲವೊಮ್ಮೆ  ಕೊಡಕ್ಕೆ (ಬಿಂದಿಗೆ) ಕಟ್ಟಿದ  ಹಗ್ಗ  ಸಡಿಲವಾಗಿ  ನೀರು  ತುಂಬಿದ  ಕೊಡ  ಬಾವಿಯಲ್ಲೇ ಉಳಿದು ಕೊಂಡುಬಿಡುತ್ತದೆ.

ಹೀಗೆ  ಆಳದ  ಬಾವಿಗೆ  ಬಿದ್ದ  ಬಿಂದಿಗೆ, ಪಾತ್ರೆ  ಅಥವಾ  ಇನ್ನಾವದೇ  ಚಿಕ್ಕ  ಪುಟ್ಟ  ವಸ್ತುವನ್ನು ಬಾವಿಯಿಂದ ಮೇಲಕ್ಕೆತ್ತಲು ಪಾತಾಳ ಗರಡಿ ಎನ್ನುವ ಈ ಪರಿಕರ  ಬಳಕೆಯಾಗುತ್ತದೆ. ಉದ್ದವಾದ ಹಗ್ಗಕ್ಕೆ ಈ ಪರಿಕರವನ್ನು ಕಟ್ಟಿ ಬಾವಿಯ ತಳಕ್ಕೆ ಇಳಿಸಿ ಒಮ್ಮೆ ತಳಭಾಗದಲ್ಲಿ ಇದನ್ನು ಸುತ್ತಿಸಿದರೆ ಬಾವಿಯಲ್ಲಿರುವ ವಸ್ತುಗಳು ಈ ಪರಿಕರದ ಮುಳ್ಳುಗಳಿಗೆ ಸಿಕ್ಕು ಹಾಕಿಕೊಳ್ಳುತ್ತವೆ. ನಂತರ ನಿಧಾನವಾಗಿ ಹಗ್ಗವನ್ನು ಮೇ¯ಕ್ಕೆಳೆದು ಪಾತಾಳ ಗರಡಿಯ ಮುಳ್ಳುಗಳಿಗೆ ಸಿಕ್ಕಿಕೊಂಡ ವಸ್ತುಗಳನ್ನು ತೆಗೆದುಕೊಳ್ಳಬಹುದು. ದಿವಂಗತ ಹಂದಿಗೋಡು ಶೇಷಗಿರಿಯಪ್ಪನವರ ಕಲ್ಪನೆಯಲ್ಲಿ ಅರಳಿದ ಈ ಪರಿಕರ, ಬದಲಾದ ಕಾಲಘಟ್ಟದಲ್ಲಿ ಕೊಳವೆ ಬಾವಿ, ಪಂಪಸೆಟ್ ಗಳ ಕಾರಣ ಮನೆಯ ಅಟ್ಟ ಸೇರಿದೆ.

ಹೊಸ್ಮನೆ ಮುತ್ತು

Leave a Reply