ದಾಸರು ಕಂಡಂತಹ ಮಾಘ ಮಾಸದ ವರ್ಣನೆ

ದಾಸರು ಕಂಡಂತಹ ಮಾಘ ಮಾಸದ ವರ್ಣನೆ

ಮಾಸಹಬ್ಬದ ಚಿಂತನೆ

ಚಳಿಗಾಲದ ದಿನಗಳಿಗೆ ವಿದಾಯ ಮತ್ತು ವಸಂತ ಋತುವಿನ ಆಗಮನ.ವಸಂತ ಪಂಚಮಿಯು ಪ್ರಾಚೀನ ಹಿಂದೂ ಹಬ್ಬವಾಗಿದ್ದು, ಇದು ವಸಂತಕಾಲದ ಆಗಮನ ಮತ್ತು ಹೋಳಿಯಂತಹ ಅನೇಕ ಮಂಗಳಕರ ಸಂದರ್ಭಗಳ ಮುನ್ಸೂಚನೆಯಾಗಿದೆ.

ಭಾರತೀಯ ಸಂಸ್ಕೃತಿಯಲ್ಲಿ ದಿನವು ಮಹತ್ವದ ಮೌಲ್ಯವನ್ನು ಹೊಂದಿದೆ,ಇನ್ನು ಭೋಗಿ ಹಬ್ಬವನ್ನು ಮಕರ ಸಂಕ್ರಾಂತಿಯ ಹಿಂದಿನ ದಿನ ಅಂದರೆ ಧನುರ್ಮಾಸದ ಕಡೆಯ ದಿನ ಆಚರಿಸುತ್ತಾರೆ, ಇನ್ನೊಂದು ಮಾಘ ಮಾಸದ ರಥಸಪ್ತಮಿ ದಿನದಂದು ಭೋಗಿ ಕೊಡುತ್ತಾರೆ. ಹೀಗೆ ಒಟ್ಟು ಎರಡು ಸಾರಿ ಭೋಗಿ

ಮೊರದ ಬಾಗಿನದಲ್ಲಿ ಇಡತಕ್ಕಂತಹ ವಸ್ತುಗಳು :

ಅಕ್ಕಿ, ಬೇಳೆಗಳು, ಎಳ್ಳು, ಉಪ್ಪು, ಹುಣಿಸೇ ಹಣ್ಣು, ದೇವರ ದೀಪಕ್ಕೆ ಉಪಯೋಗಿಸುವ ಬತ್ತಿಗಳು, ಬೆಲ್ಲ, ಧನಿಯ, ಜೀರಿಗೆ, ಲವಂಗ, ಮೆಣಸು, ಇಂಗು, ಎಣ್ಣೆ, ತುಪ್ಪ, ಕೊಬ್ಬರಿ, ಅರಿಶಿಣ, ಕುಂಕುಮ, ಅನಿಷಿದ್ಧ ಹಣ್ಣುಗಳು, ತರಕಾರಿ, ಹಾಲು, ಮೊಸರು, ಬಾಚಣಿಕೆ, ಬಿಚ್ಚೋಲೆ, ಕರಿಮಣಿ, ಕುಪ್ಪಸದ ಕಣ, ಕನ್ನಡಿ, ಬಳೆ, ಕಾಡಿಗೆ, ವಿಳ್ಳೇದೆಲೆ, ಅಡಕೆ, ದಕ್ಷಿಣೆ. ತರಕಾರಿ, ಹಣ್ಣುಗಳು, ಧವಸಧಾನ್ಯಗಳು , ಎಣ್ಣೆ, ತುಪ್ಪ ಇವುಗಳನ್ನು ದಕ್ಷಿಣೆ ಸಹಿತ ಕೊಡ ಬೇಕು.

ಇದೆಲ್ಲವನ್ನೂ ಸಿದ್ಧಪಡಿಸಿ, ದೀಪವನ್ನು ಹಚ್ಚಿ, ದೇವರ ಮುಂದಿಟ್ಟು, ದೇವರಿಗೆ ಸಮರ್ಪಿಸಿ, ಆಹ್ವಾನಿತ ಮುತ್ತೈದೆಯ ಪಾದ ಪೂಜೆ ಮಾಡಿ, ಪೂರ್ವಾಭಿಮುಖವಾಗಿ ಮಣೆ/ ಚಾಪೆಯ ಮೇಲೆ ಕೂಡಿಸಿ, (ಬರೀ ನೆಲದ ಮೇಲೆ ಕೂಡಿಸಬೇಡಿ), ಕುಂಕುಮ ಕೊಟ್ಟು, ಅರಿಶಿನ ಕೊಟ್ಟು, ತಲೆ ಬಾಚಿ, ಹೂವು ಮುಡಿಸಿ, ಕಣ್ಣಿಗೆ ಕಾಡಿಗೆ ಹಚ್ಚಿ, ಕನ್ನಡಿಯಿಂದ ಅವರ ಮುಖವನ್ನು ತೋರಿಸಿ, ವಿಳ್ಳೇದೆಲೆ ಆಡಕೆ ದಕ್ಷಿಣೆ ಕೊಟ್ಟು, ಕೊಡುವವರ ಸೆರಗು ಮತ್ತು ಪಡೆದುಕೊಳ್ಳುವವರ ಸೆರಗು ಮೊರದ ಬಾಗಿನದ ಮೇಲೆ ಹರಡಿ ಮೂರು ಬಾರಿ ತೂಗಿ, ದಾನ ಕೊಟ್ಟು, ನಂತರ ಮೊರದ ಬಾಗಿನದ ಮೇಲಿನ ಮೊರವನ್ನು ತೆಗೆದು ಮುತ್ತೈದೆಗೆ ತೋರಿಸಬೇಕು. ನಂತರ ಮುತ್ತೈಗೆ ನಮಸ್ಕರಿಸಿ ಆಶೀರ್ವಾದ ಪಡೆಯಬೇಕು.
ಮರದ ಬಾಗಿನ ಕೊಡುವವರು ಹೇಳುವ ಮಂತ್ರ
ರಾಮಪತ್ನೀ ಮಹಾಭಾಗೇ ಪುಣ್ಯಮೂರ್ತೇ ನಿರಾಮಯೇ |
ಮಯಾದತ್ತಾನಿ ಶೂರ್ಪಾಣಿ ತ್ವಯಾ ಸ್ವೀಕೃತಾ ಜಾನಕೀ |
ಮರದ ಬಾಗಿನ ಪಡೆಯುವವರು ಹೇಳುವ ಮಂತ್ರ
ರಾಮಪತ್ನೀ ಮಹಾಭಾಗೇ ಪುಣ್ಯಮೂರ್ತೇ ನಿರಾಮಯೇ |
ತ್ವಯಾ ದತ್ತಾನಿ ಶೂರ್ಪಾಣಿ ಮಯಾ ಸ್ವೀಕೃತಾ ಜಾನಕೀ |

ರಥ ಸಪ್ತಮಿಯ ಬಗ್ಗೆ ಹೇಳುವುದಾದರೆ
ಸೂರ್ಯ ತನ್ನ ಪಥ ಬದಲಾಯಿಸುವ ಕಾಲ ಅಲ್ಲಿಂದ ಬೇಸಿಗೆ ಕಾಲ ಪ್ರಾರಂಭವಾಗುತ್ತದೆ.
ರಥ ಸಪ್ತಮಿ ಸೂರ್ಯ ನಾರಾಯಣನಿಗೆ ವ ಪೂಜೆ ಮಾಡ ಬೇಕು. ದೇವರ ಮನೆಯಲ್ಲಿ ಒಂದು ಮಣೆಯ ಮೇಲೆ ಸಾರಿಸಿ ಸೂರ್ಯನ ರಥವನ್ನು ಬಿಡಿಸಿ ಅರಿಷಿಣ, ಕುಂಕುಮ, ಗೆಜ್ಜೆವಸ್ತ್ರ ಏರಿಸಿ ಪೂಜೆ ಮಾಡಬೇಕು . ಒಂದು ಚಿಕ್ಕ ಪಾತ್ರೆಯಲ್ಲಿ ಹಾಲು ಹಾಕಿ ಕಾಯಿಸಬೇಕು. ಯಾವ ದಿಕ್ಕಿನಲ್ಲಿ ಉಕ್ಕಿ ಚೆಲ್ಲುತ್ತದೆಯೋ ಆ ದಿಕ್ಕು ಸಮೃದ್ಧಿಯಿಂದ ಬೆಳೆಯುತ್ತದೆ ಅಂತ ಹಿರಿಯರು ಹೇಳಿದ ಪಾಠ, ಅದೇ ಹಾಲನ್ನೇ ಸೂರ್ಯ ನಾರಾಯಣನಿಗೆ ನೈವೇದ್ಯ ಮಾಡಿ ಮನೆಯ ಸದಸ್ಯರೆಲ್ಲ ಊಟದಲ್ಲಿ ಉಪಯೋಗಿಸಬೇಕು.ಸ್ನಾನ ಮಾಡುವಾಗ ಗಂಡಸರು ” ಎಕ್ಕೆ ಎಲೆಗಳನ್ನು ತಲೆಯ ಮೇಲಿಟ್ಟುಕೊಂಡರೆ ಹೆಣ್ಮಕ್ಕಳು ಹೆಗಲ ಮೇಲಿಟ್ಟುಕೊಂಡು ಸ್ನಾನ ಮಾಡಬೇಕು.
ಏಳು ಎಕ್ಕೆ ಎಲೆ ಇಟ್ಟು, ಸ್ನಾನ ಮಾಡುವಾಗ ಈ ಮಂತ್ರ ಜಪಿಸಬೇಕು. ಯದಾ ಜನ್ಮ ಕೃತಂ ಪಾಪಂ ಮಯಾ ಜನ್ಮಸು ಜನ್ಮಸು | ತಮ್ಮ ರೋಗಂ ಚ ತೋಕಂ ಚ ಮಾಕರೀ ಹಂತು ಸಪ್ತಮಿ
ಈ ದಿನ ಬೂದು ಕುಂಬಳಕಾಯಿಯನ್ನು ಸತ್ಪಾತ್ರದಲ್ಲಿ ದಾನ ಮಾಡಿದರೆ ವಿಶೇಷ ಪುಣ್ಯ ಪ್ರಾಪ್ತಿ ಆಗುವದು. ರಥಸಪ್ತಮಿ ಮರುದಿನ ಭೀಷ್ಮಾಷ್ಟಮಿ ಬರುತ್ತದೆ ಅರ್ಹರಾದವರು
ಭೀಷ್ಮ ಪಿತಾಮಹರಿಗೂ ತರ್ಪಣವನ್ನು ಅವಶ್ಯ ಕೊಡಬೇಕು.

ಇದೇ ಮಾಸದಲ್ಲಿ ಮಾದ್ವನವಮಿ ಬರುತ್ತದೆ. ಈ ದಿನ ಆನಂದತೀರ್ಥರು ಬದರಿಕಾಶ್ರಮ ಪ್ರವೇಶ ಮಾಡಿದ ದಿವಸ ಉಡುಪಿ ಕ್ಷೇತ್ರದಲ್ಲಿ ಶ್ರೀ ಮಧ್ವರು ರು ಅನಂತೇಶ್ವರ ದೇವಸ್ಥಾನದಲ್ಲಿ ಪ್ರವಚನ ಮಾಡುತ್ತಿರುವಾಗ ದೇವತೆಗಳಿಂದ ಪುಷ್ಪವೃಷ್ಟಿ ಆಗುತ್ತಿದ್ದ ದೃಶ್ಯವನ್ನು ಭಕ್ತರು ನೋಡಿ ಆನಂದಪಡುವ ಸಮಯದಲ್ಲಿ ಶ್ರೀ ಮಧ್ವಾಚಾರ್ಯರ ಅದೃಶ್ಯರಾದರು.

ಭಾರತ ಹುಣ್ಣಿಮೆ ಇದನ್ನು ಕುಲಧರ್ಮ ಎನ್ನುವರು.
ಇಲ್ಲಿ ಲಕ್ಷ್ಮಿ ರೂಪಳಾದ ಹುಣ್ಣಿಮೆಯ ದಿನ ಪೂಜಿಸಿ
ಜೋಗತಿಯನ್ನು ಮನೆಗೆ ಕರೆಯಿಸಿ ಉಪ್ಪು, ಹಿಟ್ಟು, ತರಕಾರಿ ಹಾಕಿ ಪೂಜಿಸಿ, ಅವಳಿಗೆ ಊಡಿ ತುಂಬಿ
ಬೇವು ಇಳಿಸಿಕೊಳ್ಳಬೇಕು.

ರುದ್ರಾ೦ಶ ಸಂಭೂತರಾದ ವಿಷ್ಣು ತೀರ್ಥರ ಆರಾಧನೆ. ಹಾಗೇ ಇದೇ ಭೀಮದ್ವಾದಶಿಯಂದು
ಮಹಿಪತಿ ಸುತ ಶ್ರೀಕೃಷ್ಣದಾಸರ ಆರಾಧನೆ ಇರುತ್ತದೆ.

ದಾಸ ಸಾಹಿತ್ಯದಲ್ಲಿ ಹಬ್ಬಗಳ ಪರಿಕಲ್ಪನೆ :-

ಅನೇಕ ಹರಿದಾಸರು ಹರಿದಾಸಿಯರು ಪ್ರತಿ ಮಾಸದ ಬಗ್ಗೆ ಹಾಗೂ ಅದರಲ್ಲಿ ಬರುವ ಹಬ್ಬಗಳ ಬಗ್ಗೆಯೂ ವರ್ಣನೆ ಮಾಡಿದ್ದಾರೆ.

ಪುರಂದರದಾಸರು ಒಂದು ಕೃತಿಯಲ್ಲಿ
“ವರತೀರ್ಥರಾಜ ಪ್ರಯಾಗವೆನಿಸುವ ಕ್ಷೇತ್ರ – |ದೊರೆ ಮಾಧವನ ಭಜಿಸಿರೈ ಆ ಮಾಘಮಾಸದತಿಶಯವಾದ ಸ್ನಾನವನು |ಈ ಮಹಾನದಿಯೊಳಗೆ ಮಾಡಲೋಸುಗಬೊಮ್ಮ”
ಈ ಕೃತಿಯಲ್ಲಿ ಪುಣ್ಯ ಸುಕ್ಷೇತ್ರಗಳ ಪರಿಚಯಿಸಿ ನಿತ್ಯ ಕರ್ಮಗಳ ಬಗ್ಗೆ ಹೇಳಿದ್ದಾರೆ.

ಶ್ರೀ ಪ್ರಾಣೇಶ ದಾಸರು ತಮ್ಮ ಒಂದು ದಶವತಾರದ ಕೃತಿಯಲ್ಲಿ
“ವ್ಯಾಸೋಕ್ತಿಯನುಸರಿಸಿ ಹತ್ತು ಅವತಾರವನುಶ್ರೀಶ ಮಾಡಿದ ದಿನದ ಕ್ಲಪ್ತಿಯಂ ಬರೆವೆ ಸಂ- |ತೋಷದಿಂ ಕೇಳ್ಪುದೆಲ್ಲರು ಪೊರೆವ ಹರಿಯು/ ಪ……….. ಮುಂದೆ ಶುಭ ಮಾಘ ಮಾಸದಲಿಶುಕ್ಲ ಪಕ್ಷದ ಸಪ್ತಮೀ ಭಾನುವಾರದಲಿಅಕ್ಲೇಶಪ್ರದ ಅಶ್ವಿನೀ ಸಾಧ್ಯಯೋಗದಲಿ ಶುಕ್ಲಶೋಣಿತ ವಿದೂರ ||ಶುಕ್ಲಾಂಬರಧರ ಕಿಟಿರೂಪದಿಂದವತರಿಸಿಹಕ್ಲಾಸುರ ಹಿರಣ್ಯಶನ ತರಿದುತ್ವರತನ್ನಒಕ್ಲಾದವರ ಪೊರೆದ.
ಅಂದರೆ ಮಾಘ ಮಾಸದ ಶುಕ್ಲ ಪಕ್ಷದಲ್ಲಿ ಹಿರಣ್ಯಕಶ್ಯಪ ಸಂಹರಿಸಿ ಆ ಮನೆಯ ಒಕ್ಕಲದವರನ್ನು ಪೊರೆದನು ಎಂಬುದರ ಬಗ್ಗೆ ಹೇಳಿದ್ದಾರೆ.

ತಮ್ಮ ಇನ್ನೊಂದು ಕೃತಿಯಲ್ಲಿ “ತಿಂಗಳಿಗೆ ತಿಂಗಳಿಗೆ ಬರುತಿಹ | ಪಿಂಗಳರ ನಾಮವನು ಬರೆವೆನು |
……………..ಮಾಘಮಾಸದಲಿ ||ಸುರನದಿಯೆ ಮೊದಲಾಗಿಹ ಐ |ವರಿಗೆ ಸಮಪರ್ಜನ್ಯ ಫಾಲ್ಗುಣ |ಕರಿತು ಇಂತು ಯಥಾವಿಧಿಯೊಳಘ್ರ್ಯವನು ಕೊಟ್ಟು ಜಪವ” ಯಾವ ಮಾಸದ ದೇವತೆ ಪೂಜೆ ಜಪ ಮಾಡಿದರೆ ಇಷ್ಟಾರ್ಥವ ಕೊಟ್ಟು ರಕ್ಷಿಸುವನು ಎಂದು ಹೇಳಿದ್ದಾರೆ.

ಮಾಘ ಮಾಸದ ಸ್ನಾನದ ವಿಷೇಶತೆ ಇದೆ. ಆದ್ದರಿಂದ ಅಂಬಾಯಿಯವರು
ಪುಣ್ಯ ನದಿಗಳ ಸ್ಮರಣೆ ಮಾಡುತ್ತಾ ತಮ್ಮ ಕೃತಿಯಾದ “ನಮಿಪೆ ನದಿ ದೇವತೆಗಳೇ | ನಿಮಗೆ ಪ.
“ಮಾಘ ಶುದ್ಧ ನವಮೀ ಭರಣಿ ಸಂಯೋಗದ ಪರ್ವವೆಂದು ಭದ್ರೆಲಿ ಸ್ನಾನ” ಎಂದು ವರ್ಣಿಸಿದ್ದಾರೆ.
ಇವರ ಇನ್ನೊಂದು ಕೃತಿಯಾದ
“ಸೂರ್ಯ | ನಾರಾಯಣ ರಥ
ಸೂರ್ಯ ಪ.
ಸೂರ್ಯ ರಥವನು
ಭಾರಿ ವಸನಾಭರಣ ತೊಡುತಲಿ
ಮೂರುಲೋಕವ ಬೆಳಗು ಮಾಡುತ
ಭಾರಿ ತಮವನು ಛೇದಿಸುತ್ತ ಅ.ಪ.”
ಈ ಕೃತಿಯಲ್ಲಿ ಉತ್ತರಾಯಣದ ಬಗ್ಗೆ, ಮಾಘ ಮಾಸ, ರಥಸಪ್ತಮಿ ಹೀಗೆ ಸೃಷ್ಟಿ ನಿಸರ್ಗದ ಸೊಬಗಿನ ಜೊತೆ ಎಲ್ಲವನ್ನು ವರ್ಣಿಸಿದ್ದಾರೆ.

ಸರಸ್ವತಿ ಬಾಯಿ ಅವರು ಸಹ “ತುಳಸಿ ಪೂಜೆ ಮಾಡಿ ಹರಿ ಪ್ರೇಮದ ಪ.
ಹಳದಿ ಕುಂಕುಮ ಪರಿಮಳದ ಗಂಧದಿ
ಅಂಗಳದಿ ಶೋಭಿಪ ಹರಿಸತಿ ಅ.ಪ.” ಕೀರ್ತನೆಯಲ್ಲಿ ತುಳಿಸಿ ಪೂಜೆಯ ವರ್ಣನೆಯಲ್ಲಿ ಮಾಘ ಮಾಸದ ತುಳಿಸಿ ಪೂಜೆ ತಿಳಿಸಿದ್ದಾರೆ.

ಇನ್ನು ರಂಗೇಶ ವಿಠ್ಠಲ ದಾಸರು ತಮ್ಮ ಕೃತಿಯಾದ
“ಮಾಸ ನಿಯಾಮಕ ದೇವತೆಗಳ ವರ್ಣಿಸುವೆನು ಪ
ಶ್ರೀಶನಾಜ್ಞೆಯಲಿ ಸಕಲ ಸುಜನರಿದ ಕೇಳಿ ಅ.ಪ.
………….. ಮಾಘದೊಳು ಅರುಣನಾಮಕ ಸವಿತೃ
ಚಪಲಾಕ್ಷಿ ರುಕ್ಮಿಣೀರಮಣ ಮಾಧವನು ದೊರೆಯು
ತಪಸ್ಯವೆನಿಪ ” ಇಲ್ಲಿ ಮಾಸ ನಿಯಾಮಕ ದೇವತೆಗಳ ಬಗ್ಗೆ ವರ್ಣಿಸುತ್ತಾ ಮಾಘ ಮಾಸದ “ಅರುಣನಾಮಕ ” ಮಾಸ ದೇವತೆ ಎಂದು ಹೇಳಿದ್ದಾರೆ.

ಹರಿದಾಸಿ ಎದುಗಿರಿಯಮ್ಮ ತಮ್ಮ ಒಂದು ಕೃತಿಯಲ್ಲಿ ಶ್ರೀರಂಗನಾಥನಿಗೆ ಯಾವ ಯಾವ ಮಾಸದಲ್ಲಿ ಯಾವ ಯಾವ ಉತ್ಸವ ಆಚರಿಸುತ್ತಾರೆ ಎಂಬುದನ್ನು ,
ಈ ಕೀರ್ತನೆಯಲ್ಲಿ ಹೇಳಿದ್ದಾರೆ.
“ಶ್ರೀರಂಗವಾಸಿಗಳು ಏನು ಸುಕೃತಿಗಳೊ /ಪ
………….. ಮಾರ್ಗಶಿರ ಮಾಸದಿ ಪವಿತ್ರ ಕೊ
ಟ್ಟಿಗೋತ್ಸವ ಪುಷ್ಯಮಾಸದಿ ಪುನರ್ವಸುರಥವೂ
ಮಾಘಮಾಸದಲಿ ತೆಪ್ಪೋತ್ಸವ ಸಂಭ್ರಮವು”
ಎಂದು ಹೀಗೆ ವರ್ಣಿಸಿದ್ದಾರೆ.

ಶ್ರೀ ಪ್ರಸನ್ನ ಶ್ರೀನಿವಾಸದಾಸರು ಶ್ರೀ ವಿಷ್ಣು ತೀರ್ಥರು ಹರಿಪಾದ ಸೇರಿದ ಬಗ್ಗೆ ಹೇಳಿದ್ದಾರೆ.
“ತೃತೀಯ ಕೀರ್ತನೆಶ್ರೀ ಹರಿಪಾದಾಬ್ಜರತ ಶ್ರೀ ವಿಷ್ಣು ತೀರ್ಥವನ-ರುಹಅಂಘ್ರಿಯುಗ್ಮದಲಿ ಶರಣಾದೆ ಸತತಪಮಹಾಕರುಣಿಯು…………..
ಚಿಂತನೆ ಮಾಡಿಹದಿನೇಳ್ ನೂರಿಪ್ಪತ್ತು ಎಂಟು ಶಕ ಮಾಘ ತ್ರ -ಯೋದಶಿ ಕೃಷ್ಣದಲ್ಲಿ ಕೃಷ್ಣನ ಸೇರಿದರು” ಎಂದು ಬರೆದಿದ್ದಾರೆ.
ಹೀಗೆ ಇನ್ನು ಸಾಕಷ್ಟು ಎಲ್ಲ ಹರಿದಾಸರು ಹರಿದಾಸಿಯರು ಮಾಸ ಮತ್ತು ಮಾಸದ ಹಬ್ಬಗಳ ಬಗ್ಗೆ ವರ್ಣನೆ ಮಾಡಿದ್ದಾರೆ.

✍️ ಪ್ರಿಯಾ ಪ್ರಾಣೇಶ ಹರಿದಾಸ,

Leave a Reply