ಮಾಡುವ ಮತ್ತು ಮಾಡದಿರುವ ಜ್ಞಾನಿಯ ಪರಿ

ಮಾಡುವ ಮತ್ತು ಮಾಡದಿರುವ ಜ್ಞಾನಿಯ ಪರಿ

ಕರ್ಮದ ಗತಿಯು ಗಹನ. ಆದ್ದರಿಂದ ಕರ್ಮ, ಅಕರ್ಮ ಮತ್ತು ವಿಕರ್ಮಗಳ ಸ್ವರೂಪಗಳ ಬಗ್ಗೆ ಅರಿವನ್ನು ಬೆಳೆಸಿಕೋಎಂದು ಕೃಷ್ಣನು ಸೂಚಿಸಿದ್ದನ್ನು ನೋಡಿದ್ದೇವೆ. ಮುಂದುವರಿಸುತ್ತ ಹೀಗೆ ಹೇಳುತ್ತಾನೆ: ‘ಕರ್ಮದಲ್ಲಿ ಅಕರ್ಮವನ್ನೂ ಅಕರ್ಮದಲ್ಲಿ ಕರ್ಮವನ್ನೂ ಯಾರು ನೋಡಬಲ್ಲನೋ ಅಂಥವನು ಬುದ್ಧಿವಂತನು. ಮನುಷ್ಯರ ಪೈಕಿ (ಅಂತಹವನೇ) ಎಲ್ಲ ಕರ್ಮಗಳನ್ನು ‘‘ಮಾಡಿದವ’’ನೆನಿಸುತ್ತಾನೆ.’ (.ಗೀ.: 4.18)

ಅಕರ್ಮದಲ್ಲಿ ಕರ್ಮವನ್ನು ಕಾಣುವುದುಎಂದರೆಕರ್ತವ್ಯಗಳನ್ನು ಮಾಡದೆ ಸುಮ್ಮನೆ ಇರುವುದುಎಂದರ್ಥವಲ್ಲ. ಕರ್ತವ್ಯ ಹಾಗೂ ಲೋಕಸಂಗ್ರಹಕಾರ್ಯಗಳನ್ನು ಎಲ್ಲರೂ ಮಾಡಲೇಬೇಕು. ‘ಭೋಗಸಂಕಲ್ಪಗಳ ಬೆನ್ನಟ್ಟಿ ಅನಗತ್ಯ ಕರ್ಮಗಳನ್ನು ಹಮ್ಮಿಕೊಳ್ಳದೆ ಶಾಂತವಾಗಿರುವುದುಎಂದರ್ಥ. ‘ಅಗತ್ಯವಿದ್ದಷ್ಟೇ ಕರ್ಮಗಳನ್ನು ಮಾಡುತ್ತ, ಅಥವಾ ಲೋಕಕಲ್ಯಾಣಕ್ಕೆ ಅಗತ್ಯವಿದ್ದಷ್ಟು ಮಾತ್ರವೇ ಕರ್ಮಪ್ರಸಕ್ತಿಯನ್ನು ಬೆಳೆಸಿಕೊಳ್ಳುವುದುಎಂದರ್ಥ. ‘ಚಪಲಕ್ಕಾಗಿ ಬೇಡದ ಸಲ್ಲದ ಕರ್ಮಗಳ ಬಂಧಗಳಲ್ಲಿ ಸಿಲುಕದೆ ಇರುವುದುಎಂದರ್ಥ. ‘ಕರ್ಮದಲ್ಲಿ ಅಕರ್ಮವನ್ನು ಕಾಣುವುದುಎಂದರೆ ಕರ್ಮವನ್ನು ಮಾಡಿಯೂನಾ ಮಾಡುವೆ, ನಾನು ಅನುಭವಿಸುವೆಎಂಬ ಮಮಕಾರ ಭಾವವಿಲ್ಲದೆ ಇರುವುದು ಎಂದರ್ಥ. ಮಮಕಾರಫಲಾಸಕ್ತಿಗಳಿಲ್ಲದೆ, ಕರ್ತವ್ಯೆ ೖಕದೃಷ್ಟಿಯಿಂದ ಕರ್ಮವೆಸಗುವವನು, ‘ಮಾಡಿದರೂ ಮಾಡದಿರುವ ಅಕರ್ತಾಎನ್ನುವುದನ್ನು ಕೃಷ್ಣನು ಪದೇಪದೆ ಹೇಳುತ್ತಲೇ ಬಂದಿದ್ದಾನೆ.

ಎಲ್ಲರೂ ಅವರವರ ವಿಹಿತಕರ್ಮಗಳಲ್ಲಿ ತೊಡಗಿಕೊಂಡಿದ್ದು ನಿರ್ಲಿಪ್ತವಾಗಿದ್ದರೆ, ಯಾರಿಗೂ ಯಾವ ತೊಂದರೆಯೂ ಸಂಭವಿಸದು! ಸಮಸ್ಯೆ ಪ್ರಾರಂಭವಾಗುವುದೇ ವ್ಯಕ್ತಿಗಳು ಕಾಮಲೋಭಗಳಾಟಕ್ಕೆ ಎಡೆ ಮಾಡಿಕೊಟ್ಟಾಗ! ತನ್ನ ಅನ್ನ ಬಟ್ಟೆ ಮನೆಗಳನ್ನು ಸಂಪಾದಿಸುವವನಿಂದ ಯಾರಿಗೂ ತೊಂದರೆಯಾಗದು. ಆದರೆ ಲೋಭಾತುರದಲ್ಲಿ ಕಂಡಕಂಡವರ ಸೊತ್ತನ್ನು ಬಾಚುವವನಿಂದಲೇ ತೊಂದರೆ! ಆಸೆಮಮಕಾರಗಳ ವಶಕ್ಕೆ ಸಿಕ್ಕವರಿಗೆ ಯೋಗದ ಮಾತಂತಿರಲಿ, ದಕ್ಕಿದ ಭೋಗವೂ ತೃಪ್ತಿಯೀಯದು. ಅಂಥವರು ಗಳಿಸಿದಷ್ಟೂ ಅತೃಪ್ತರೂ ಅಶಾಂತರೂ ಅತಂತ್ರರೂ ಆಗುತ್ತ ಅದನ್ನೇ ಸುತ್ತಲೂ ಹರಡುತ್ತಾರೆ ಕೂಡ. ಹಾಗಾಗಿಯೇ ಸನಾತನ ಸಂಸ್ಕೃಯಲ್ಲಿ ವಿದ್ಯಾರ್ಥಿದೆಸೆಯಿಂದಲೇ ಸರಳತೆ ತ್ಯಾಗ ನಿರ್ಲಿಪ್ತಿಗಳ ತರಬೇತಿಯನ್ನು ಮೊದಲು ಕೊಟ್ಟು, ಬಳಿಕ ಲೌಕಿಕವೃತ್ತಿಗಳನ್ನು ಕಲಿಸುವ ಪದ್ಧತಿಯಿದೆ. ಆಗ ಮಾತ್ರವೇ ವ್ಯಕ್ತಿಗಳು ಯಾವುದೇ ಹುದ್ದೆಯಲ್ಲಿದ್ದರೂ ಧರ್ಮನಿರತರಾಗಲು ಸಾಧ್ಯ. ಅಂಕಗಳಿಗಾಗಿ ಒಂದಿಷ್ಟು ಗಣಿತ ವಿಜ್ಞಾನ ಭಾಷೆಗಳನ್ನು ಕಲಿಸಿ ಲೋಕಕ್ಕೆ ತಳುವ ಇಂದಿನ ಕುತ್ಸಿತ ಶಿಕ್ಷಣಪದ್ಧತಿಯಲ್ಲಿ ತಯಾರಾಗುತ್ತಿರುವ ವ್ಯಕ್ತಿಗಳಲ್ಲಿ ಮಾತೆತ್ತಿದರೆ ಕಲಹ, ಭ್ರಷ್ಟಾಚಾರ, ವಿಚ್ಛೇದನ, ಮಾನಸಿಕ ಖಿನ್ನತೆ, ಆತ್ಮಹತ್ಯೆ, ದಂಗೆ, ಕೊಲೆಗಳಿಗೆ ವಶವಾಗುವ ದೌರ್ಬಲ್ಯವನ್ನು ಗಮನಿಸಿದರೆ ನಿರ್ಲಿಪ್ತಿಯ ಪಾಠ ಲೌಕಿಕರಿಗೆ ಎಷ್ಟು ಅಗತ್ಯದ್ದು ಎನ್ನುವುದು ನಮಗೇ ಅರ್ಥವಾಗುತ್ತದೆ!

ಮಾಡಿಯೂ ಮಾಡದಂತಿರಬಲ್ಲವನುಹಾಗೂಮತ್ತೆ ಮತ್ತೆ ಮಾಡಲೇಬೇಕಾದ ಭೋಗವಿವಶತೆ ಳಲ್ಲದೆ ಶಾಂತವಾಗಿರಬಲ್ಲವನು ಮನುಷ್ಯರ ಪೈಕಿ ಬುದ್ಧಿವಂತನು. ಅಂತಹವನುಕೃತ್ಸ್ನಕರ್ಮಕೃತ್ಅರ್ಥಾತ್ಎಲ್ಲ ಕರ್ಮಗಳನ್ನು ಮಾಡಿ ಮುಗಿಸಿದವನುಎನ್ನುತ್ತಿದ್ದಾನೆ ಕೃಷ್ಣ. ಮಾಡಬೇಕಾದ ಕರ್ಮಗಳನ್ನು ಭೌತಿಕವಾಗಿ ಮಾಡಿ ಮುಗಿಸಿದ ಮಾತ್ರಕ್ಕೇಕೃತಕೃತ್ಯತೆಸಿದ್ಧಿಸದು. ಅಲ್ಲಿಂದಾಚೆ, ಮಾಡಿದ ಕರ್ಮ ಹಾಗೂ ಕರ್ಮಫಲಗಳ ಬಗ್ಗೆ ನಿರ್ಲಿಪ್ತಿಯೂ ಹಾಗೂ ಮತ್ತೆ ಮತ್ತೆ (ಭೋಗಕ್ಕಾಗಿ) ಕರ್ಮ ಮಾಡುವ ಚಾಪಲ್ಯವನ್ನು ಗೆಲ್ಲುವುದೂ ಸಾಧ್ಯವಾದಾಗಲೇಕೃತ್ಸ್ನಕರ್ಮಕೃತ್ಮನುಷ್ಯನು ಎನಿಸುತ್ತಾನೆ. ಹೀಗೆ ಕೃಷ್ಣನು, ನಿರ್ಲಿಪ್ತ ಕರ್ವಚರಣೆ ಹಾಗೂ ಭೋಗನಿಮಿತ್ತ ಕರ್ಮದ ತ್ಯಾಗವನ್ನು ಒತ್ತಿ ಹೇಳುತ್ತಲೇ ಬರುತ್ತಿರುವುದು ಗಮನೀಯ. ಅದೊಂದೇಯೋಗಕ್ಕೆ ಹೆದ್ದಾರಿಎನ್ನುವುದು ಕೃಷ್ಣನ ಸ್ಪಷ್ಟ ನಿರ್ದೇಶ.

‘‘ಯಾರ ಎಲ್ಲ ಆರಂಭಗಳೂ (ಕರ್ಮಪ್ರಸಕ್ತಿಗಳೂ) ಕಾಮ ಸಂಕಲ್ಪ ವರ್ಜಿತವೋ (ಭೋಗದ ಉದ್ದೇಶದಿಂದ ಪ್ರವರ್ತಿಸಿಲ್ಲವೋ) ಹಾಗೂ ಯಾರ ಎಲ್ಲ ಕರ್ಮಗಳೂ ಜ್ಞಾನಾಗ್ನಿದಗ್ಧವೋ (ಅರಿವೆಂಬ ಬೆಂಕಿಯಲ್ಲಿ ಸುಡಲ್ಪಟ್ಟಿದ್ದು, ಅವನನ್ನು ಇನ್ನು ಮೋಹದಿಂದ ಬಂಧಿಸಲಾರವೋ) ಅಂಥವನನ್ನುತಿಳಿದವರುಪಂಡಿತಎಂದು ಕರೆಯುತ್ತಾರೆ.’’ (.ಗೀ.: 4.19)

ಲೋಕರೂಢಿಯಲ್ಲಿಪಂಡಿತನೆಂದರೆ, ‘ಓದು ಬರಹ ವ್ಯಾಖ್ಯಾನ ತರ್ಕಾದಿಗಳಲ್ಲಿ ನಿಪುಣಎಂದರ್ಥ. ಆದರೆಪಂಡಎಂಬ ಶಬ್ದದರ್ಥಜ್ಞಾನ’. ‘ಪಂಡುಎಂದರೆಮಾಗಿದ’ ‘ಪಕ್ವವಾದಎಂಬರ್ಥಗಳಿವೆ. ‘ಅರಿವಿನಿಂದ ಮಾಗಿದ ಮತಿಯುಳ್ಳ ಪ್ರೌಢನೇ ಪಂಡಿತಎನ್ನುವುದು ಇಲ್ಲಿನ ಅಭಿಪ್ರಾಯ.

ಕರ್ಮಫಲದಲ್ಲಿ ಸಂಪರ್ಕವನ್ನು (ಆಸಕ್ತಿಯನ್ನು) ತ್ಯಜಿಸಿ ಯಾವನು ನಿತ್ಯತೃಪ್ತನೂ ನಿರಾಶ್ರಯನೂ (ಲೌಕಿಕದ ಹಂಗನ್ನು ಬಿಟ್ಟವನು) ಆಗಿರುತ್ತಾನೋ, ಅಂಥವನು ಲೋಕದ ಕರ್ಮಗಳಲ್ಲಿ ತೊಡಗಿದ್ದರೂ ಆತ ನಿಜಕ್ಕೂ ಏನನ್ನೂ ಮಾಡುವುದಿಲ್ಲ’. (.ಗೀ.: 4.20) ‘ಅಕರ್ತಾಭಾವದಿಂದ ಇರಬಲ್ಲವನೇ ಪಂಡಿತಎನ್ನುವುದನ್ನೇ ಕೃಷ್ಣನು ಇಲ್ಲಿ ಮತ್ತೊಮ್ಮೆ ಹೇಳುತ್ತಿದ್ದಾನೆ.

ಆಸೆಯಿಲ್ಲದವನೂ, ಮನಸ್ಸನ್ನು ಸ್ವಾಧೀನದಲ್ಲಿಟ್ಟುಕೊಂಡವನೂ, ‘‘ಪಡೆಯುವ’’ (ಅವರಿವರಿಂದ ಏನನ್ನಾದರೂ ಪಡೆಯುತ್ತಿರುವ) ಪ್ರಸಕ್ತಿಯನ್ನು ಬಿಟ್ಟವನು, (ಮೋಹ ಮಮಕಾರಗಳಿಲ್ಲದೆ) ದೇಹದಿಂದ ಮಾತ್ರವೇ ಕರ್ಮಗಳನ್ನು ಮಾಡುವುದರಿಂದ ಆತನಿಗೆ ಪಾಪವು ತಟ್ಟುವುದಿಲ್ಲ.’ (.ಗೀ.: 4.21) ‘ಪಾಪವೆನ್ನುವುದು ಮನಸ್ಸಿನ ಮೋಹ ಮಮಕಾರಗಳಲ್ಲಿ ಜನಿಸುವಂಥದ್ದೇ ಹೊರತು ಕರ್ಮವೆಸಗುವುದರಿಂದಲ್ಲಎನ್ನುವುದೇ ಇಲ್ಲಿನ ಧ್ವನಿಯೂ ಆಗಿದೆ.

ಡಾ. ಆರತೀ ವಿ. ಬಿ.

ಕೃಪೆ: ವಿಜಯವಾಣಿ

Leave a Reply