ಅಯ್ಯೋ – ಹೂಮಂಚ – ಸಡನ್ನಾಗಿ – ಎಲ್ಲಿದೆ

ಅಯ್ಯೋ – ಹೂಮಂಚ – ಸಡನ್ನಾಗಿ – ಎಲ್ಲಿದೆ

ಓರ್ವ ತಿರುಕ ಊರಮುಂದಿನ
ಧರ್ಮಶಾಲೆಯಲ್ಲಿ ಒರಗಿದಾಗ ಕಂಡ
ಕನಸಿನಂತೆ ನನ್ನ ಕನಸಿನ ಕುದುರೆಯೂ
ನಾಗಾಲೋಟದಲ್ಲಿತ್ತು….

ಏನಾದರೂ ಸಾಹಸ ಮಾಡಿ business 
ಒಂದನ್ನು plan  ಮಾಡಿಯೇ ತಿರಬೇಕೆಂಬ
ಇತ್ತೀಚಿನ ತುಡಿತಕ್ಕೆ sudden ಆಗಿ
“ಅಯ್ಯೋ ಎಲ್ಲಿದೆ ಬಂಡವಾಳ??
ಎಲ್ಲಾ ಬರಿಗೈಲಿ ಮೊಳ ಹಾಕುವದೇ ಆಯಿತು…..
ನಿಮ್ಮಪ್ಪನೇನು ಕುಬೇರನೇ?”…

ಒಳಮನಸ್ಸು ಉಬ್ಬುತ್ತಿದ್ದ ಬಲೂನಿಗೆ
ಸೂಜಿ ಚುಚ್ಚಿ ಕನಸಿನ ಹೂಮಂಚದಿಂದ
ಧೊಪ್ಪನೇ ನೆಲಕ್ಕೆ ಕೆಡವಿದ ಪರಿಗೆ
ಮರುಗಬೇಕೋ… ವಾಸ್ತವ ತಿಳಿಸಿದಕ್ಕೆ
ಧನ್ಯವಾದ ಹೇಳಬೇಕೋ ಎಂಬ
ದ್ವಂದದಲ್ಲಿದ್ದೇನೆ…

Leave a Reply