ಅರಿವು

ಬದುಕಿದು ಅರಿವು
ಅಜ್ಞಾನಗಳಾವರಣ
ಇದನರಿತು ನಡೆಸು
ನೀ ಸುಂದರ ಜೀವನ

ಅರಿವು ಪದವಿಯಲ್ಲ
ಬಲುಧನದ ಸಿರಿಯಲ್ಲ
ಅರಿವಿದು ಇದೇ ಗುರು
ಸದ್ವ್ಯಕ್ತಿತ್ವದ ಮೂಲ ಬೇರು

ಅರಿವಿದಲ್ಲ ಹುಡುಗಾಟ
ಮೇರು ವ್ಯಕ್ತಿತ್ವದ ಮೊದಲ ಪಾಠ
ಅರಿತುಕೋ ಇಂದೇ ಶುಭ ಕಾಲ
ಸಿಕ್ಕೀತೇ ಅವಕಾಶ ಮುಂದಿನಸಲ

ಅರಿವಿದು ಹುಡುಕಾಟ
ಸುಪ್ತ ಶಕ್ತಿಗಳ ಒಳನೋಟ
ಯೋಜಿಸು ಯುಕ್ತಿ ಶಕ್ತಿಗಳ ಕೂಟ
ಓದು ಯಶಸ್ವೀ ಜೀವನದೋಟ

ನಿನ್ನ ನೀನರಿತರೆ ಜಗವನರಿಯುವೆ
ಅರಿವು ಕಣ್ತೆರೆದರೆ ಜಗದಿ ಮೆರೆಯುವೆ

Leave a Reply