ಎಲ್ಲರೊಂದೇ

ಸತ್ಯದ ಬಾನಲಿ ಹಾರುವ ಬನ್ನಿ
ಒಂದೇಗೂಡಿನ ಹಕ್ಕಿಗಳೇ
ಪ್ರೀತಿಯ ರೆಕ್ಕೆ ಬಡಿಯುತ ಬನ್ನಿ
ಪ್ರೇಮಾನಂದವ ಹರಡುತಲಿ

ದಾರಿತೊರಲು ಗುರುತಾ ಬರುವ
ತೇಜ ಸೂರ್ಯನಾ ರೂಪದಲಿ
ಮಾಯಾ ಮೋಹದ ತರೆಯನು ಸರಿಸಿ
ಜ್ಞಾನದ ಬೆಳಕನು ನೀಡುತಲಿ

ಒಳಿತು ಕೆಡುಕನು ಮೀರುತ ಮೇಲೆ
ಹಾರುವ ನೀಲಾಕಾಶದಲಿ
ಮಾತು ಮೌನಗಳ ಮೀರಿದ ಶಾಂತಿಯ
ಹರಡುವ ಇಂದೇ ಭೂಮಿಯಲಿ

ತೀರಗಳಿರದ ಸಾಗರವಾಗುವ
ಅಲೆಗಳ ಹೊಡೆತವ ಮೀರುತಲಿ
ವಿಶ್ವ ಚೇತನದಿ ಲೀನವಾಗುವ
ಅಹಂಭಾವವನು ಕಳಚುತಲಿ

1 Comment

  1. ಸದಾಶಯ ಹೊಂದಿರುವ ಕವನ ಮೆಚ್ಚುಗೆಯಾಯಿತು.

Leave a Reply