ಕಂಗಳು – ಬಂದಳು – ಬೆರಣಿ – ಸಾಬೂನು…

ಕಂಗಳು – ಬಂದಳು – ಬೆರಣಿ – ಸಾಬೂನು…
ಪುಟ್ಟ ಪುಟ್ಟ ಕನಸುಗಂಗಳ
ಎದುರು ಬೆರಣಿಗಳ ಸಾಲುಸಾಲು…
ಕೈಯ ತುಂಬಿದ ಸಗಣಿಗೂ
ಸಾಬೂನಿನ ಘಮಲು….

“ಕನಸುಗಳಿಗೇನು ಗೊತ್ತು ಯಾರ
ಕಂಗಳಿಗೆ ಬಣ್ಣ ತುಂಬಬೇಕೆಂದು.?
ಕಾಸು ಕೂಡಿಟ್ಟು ಮದುವೆಯಾಗಬೇಕು…
ಕನಸಿನ ಕುವರನ ಕೈ ಹಿಡಿಯಬೇಕು..”

ಬಂದಳು ಬೆಡಗಿ ಕಾಮನಬಿಲ್ಲು ಮುಡಿದು…
ಗುಡಿಸಲು ಬಾಗಿಲಲ್ಲೇ ಬೆದರಿದಳು ನಿಂದು….
ಛಿದ್ರವಾಯಿತು ಕಣ್ಣ ಮುಂದಿನ ಕನಸು….
‘ದರಿದ್ರಳ ಕನಸು’ ವಿಷಾದದ ನಗೆ ನಕ್ಕಿತು ಮನಸು….

Leave a Reply