ಕಪ್ಪು – ಬಿಳಿ – ಸಾವಿರ – ಐನೂರು

ಕಪ್ಪು – ಬಿಳಿ – ಸಾವಿರ – ಐನೂರು
ಎಲ್ಲರಿಗೂ ಬಿಳಿಹೆಣ್ಣು
ಕಪ್ಪು ಹಣದ ಕನವರಿಕೆ…
ಇದು ಇಂದು, ನಿನ್ನೆಯ
ವಾಂಛೆ ಅಲ್ಲ.. ಸಾವಿರಾರು
ವರುಷಗಳ ನಡವಳಿಕೆ….

ಇನ್ನು ಕೆಲವರಿರುತ್ತಾರೆ..
ಇವೆರಡನ್ನೂ ಗೆದ್ದವರು..
ಹೆಣ್ಣು, ಹಣದ ಮೋಹವೇ
ಇರದವರು…
ಇಂಥವರೇ
ಚರಿತ್ರೆ ಬರೆವವರು…
ಅವರು
ನಾಯಕರಾದರೆ,
ಐದು ದಿನ ಸಿಗಲಿ,
ಐನೂರು ದಿನಸಿಗಲಿ
ಒಂದೇ ಗುರಿ, ಒಂದೇ ಧ್ಯೇಯ..
ದೇಶದಭ್ಯುದಯ….
ಅವರು ತುಳಿಯುವದು
ಅದೊಂದೇ ಹಾದಿ…..

ಉದಾಹರಣೆ ಬೇಕೆ???
ಅವರೇ ನಮ್ಮೆಲ್ಲರ ನೆಚ್ಚಿನ
ವಾಜಪೇಯಿ, ಕಲಾಮ, ಮೋದಿ…..

Leave a Reply