ಕರ್ಮಕಾಂಡ – ಹಣ್ಣು ಹಣ್ಣು – ತಾಯಿಬೇರು – ಎಲೆಲೆ

ಕರ್ಮಕಾಂಡ – ಹಣ್ಣು ಹಣ್ಣು – ತಾಯಿಬೇರು – ಎಲೆಲೆ

ತಮ್ಮೆಲ್ಲ ಉತ್ಥಾನ – ಉಡಾನಗಳಿಗೆ
ತಾಯಿಬೇರೇ ಕಾರಣವೆಂದು
ಈ ಊರ್ಧ್ವ ಶಾಖೆಗಳಿಗೆ
ಯಾರು ತಿಳಿಹೇಳಬೇಕು???

ಏನೇ ಹೇಗೇ ಹೇಳಿದರೂ
ಹಣ್ಣು ಹಣ್ಣು ಮುದುಕ – ಮುದುಕಿಯರ
ವ್ಯರ್ಥಾಲಾಪದ label ಅಂಟಿಸಿದರೆ
ಸಹಿಸುವದಾದರೂ ಹೇಗೇ??

ಇದು ನಮ್ಮ ಕರ್ಮಕಾಂಡ
ನಾವೇ ಅನುಭವಿಸಬೇಕು ಎಂದುಕೊಂಡರೂ
ಮೈಯಲ್ಲಿ ಹರಿಯುವದು ರಕ್ತ ಅಂದಮೇಲೆ
ಭಾವನೆಗಳಿಗೆ ಅಂಕುಶ ಸಾಧ್ಯವೇ…..????

ಎಲೆಲೆ ಭಾವನೆಗಳೇ,
ಹಣ್ಣಾಗಿರುವ ದೇಹಗಳಲ್ಲಿಯೇ
ಇಷ್ಟು ಮಿಡಿಯುವ ನೀವು
ಹದಿ-ಹೃದಯಗಳಲ್ಲೇಕೆ ಕಲ್ಲಾಗುತ್ತೀರಾ???

Leave a Reply