ಕಾಣೆಯಾಗಿದ್ದಾರೆ – ಪರವಾಯಿಲ್ಲ – ಮುಂದುವರೆಯುವದು – ಕಾಲ್ತುಳಿತ

ಕಾಣೆಯಾಗಿದ್ದಾರೆ – ಪರವಾಯಿಲ್ಲ – ಮುಂದುವರೆಯುವದು – ಕಾಲ್ತುಳಿತ

ಕಾಲ್ತುಳಿತದಲ್ಲಿ
ಸಿಕ್ಕವರೆಲ್ಲ
ಸತ್ತೇ ಹೋಗುವದಿಲ್ಲ…

ತುಳಿಯುವವರ ಉದ್ದೇಶ
ಅದಾಗಿರಬಹುದು…
ಕೆಲವೊಮ್ಮೆ
ಆಗಿರಲಿಕ್ಕೂ ಇಲ್ಲ…
ಪರವಾಯಿಲ್ಲ,…

ಕೊಲ್ಲುವವ ಇದ್ದಲ್ಲಿ
ಕಾಯುವವನೂ ಇರುತ್ತಾನೆ..
ಅಂತೆಯೇ ಇವೆರಡೂ
ಅನಾದಿಕಾಲದಿಂದಲೂ
ಮುಂದುವರಿದುಕೊಂಡು ಬಂದಿವೆ..

ಈಗೀಗ ಬದುಕಿನ ಪಾಠ
ಹೇಳಿಕೊಡುವ
ತಾವೇ ಮಾದರಿಯಾಗಿ
ನಿಲ್ಲಬಲ್ಲ
ಮಹಾನುಭಾವರು
ಕಾಣೆಯಾಗುತ್ತಿದ್ದಾರೆ..

ಕಠಿಣ ಜೀವನಾನುಭವಗಳೇ
ಬದುಕನ್ನು ಸಾಣೆ ಹಿಡಿದು ಒರೆಗೆ
ಹಚ್ಚುವ ಕೆಲಸ ಮಾಡುತ್ತಲಿವೆ….

Leave a Reply