ಕಾಪಾಡಲಿ -ಮಾರಿ -ತವಕ -ಬುಗರಿ

ಕಾಪಾಡಲಿ -ಮಾರಿ -ತವಕ -ಬುಗರಿ
ಅಮಾಯಕ ಬಡಬಗ್ಗರನ್ನು ಯಾಮಾರಿಸಿ
ಕೂಡಿಟ್ಟ ಹಣದಿಂದ ಹಳೆಯದೆಲ್ಲವ ಮಾರಿ
ಹೊಸದನ್ನು ಖರೀದಿಸುವ ತವಕದಲ್ಲಿದ್ದ
ನಮ್ಮ “ಕಾಳೇಗೌಡ ಕರೀಮನಿ”ಗೆ
ಮೊನ್ನೆ ಏಕಾಏಕಿ ಎರಗಿದ ಬರಸಿಡಿಲಿನಿಂದಾಗಿ
ಬುಗುರಿಯಂತೆ ಗಿರಿಗಿರಿ ತಿರುಗಿದ ತಲೆ
ಇನ್ನೂ ಸ್ವಸ್ಥಾನಕ್ಕೆ ಬಂದಿಲ್ಲ ಎಂದು ತಿಳಿದು
ಕ್ಷಣಕಾಲ ಮರುಗುವಂತಾದರೂ
ಯಾರಾದರೂ ಅವನನ್ನು ಕಾಪಾಡಲಿ
ಅನಿಸುವ ಬದಲಾಗಿ “ಕಳ್ಳ ಆಸ್ತಿಗೆ ತಕ್ಕ ಶಾಸ್ತಿ”
ಅನುಭವಿಸಲಿ ಎಂದೇ ಮನ ಹಾರೈಸುವದೇಕೋ ….

Leave a Reply