ಕೈಚೀಲ-ಅರಿಷಿಣ-ತಾಪತ್ರಯ-ರಶೀದಿ

ಕೈಚೀಲ-ಅರಿಷಿಣ-ತಾಪತ್ರಯ-ರಶೀದಿ

ಅರಿಷಿಣ ಕುಂಕುಮ ಹಚ್ಚಿದ
ಲಗ್ನಪತ್ರಿಕೆಗಳು ಕೈ ಚೀಲದ ತುಂಬ…
ಎಲ್ಲರಿಗೂ ತಲುಪಿಸಲು ಇನ್ನೊಂದೇ ವಾರ..
ನಡುವೆ ಚಿಲ್ಲರ ಹಣಕ್ಕಾಗಿ ಪರದಾಡಬೇಕಾದ
ತಾಪತ್ರಯ ಬೇರೇ..
ನಡು ನಡುವೆ ಮಾಡುವ ಖರ್ಚಿನ
ರಶೀದಿ ಬೇರೆ ಕಾಯ್ದಿರಿಸಬೇಕು…
ಹಣದ ಬಾಬತ್ತಿನಲ್ಲಿ ಮೈಯೆಲ್ಲಾ
ಕಣ್ಣಾಗಿರಬೇಕು… ಸ್ವಲ್ಪ ಆಚೀಚೆಯಾದರೂ
ನೂರು ವರುಷಗಳ ಸಂಬಂಧ
ಮೂರು ನಿಮಿಷಗಳಲ್ಲಿ ಹುಡಿಯಾಗಬಲ್ಲದು…
ಹೇ, ದೇವಾ, ನಾನೇಕೆ ಸುಮ್ಮನೇ ಕೂಡದೇ
ಇರುವೆ ಬಿಟ್ಟುಕೊಂಡೆ.??
ಪರೋಪಕಾರದ ಹುಚ್ಚಿನಲ್ಲಿ
ನನ್ನದಲ್ಲದ ಹೊಣೆ ಹೊತ್ತು
ಕೈ ಸುಟ್ಟುಕೊಂಡೆ..?

Leave a Reply