ಗಡಿಯಾರ – ಶರಾಯಿ – ಕೋಲು – ಅಸು

ಗಡಿಯಾರ – ಶರಾಯಿ – ಕೋಲು – ಅಸು
ಕಾಲಮಹಿಮೆ
ಕಾಲನ ಕಿಂಕರರಿಗೆ
ಕರುಣೆ ಎಂಬುದಿಲ್ಲ..
ಗಡಿಯಾರದ ಮುಳ್ಳುಗಳೆಂದೂ
ಹಿಂದಕ್ಕೆ ಚಲಿಸುವದಿಲ್ಲ…

‘ಮೃತ್ಯುಂಜಯ’ ಎಂದು
ಹೆಸರಿಟ್ಟುಕೊಂಡವನೂ
ಒಂದಿಲ್ಲ ಒಂದು ದಿನ
ಅಸು ನೀಗಲೇ ಬೇಕು….

ಹೆಸರು ‘ತರುಣ’ನೇ
ಇರಬಹುದು…
ಒಂದಿಲ್ಲ ಒಂದಿನ ಕೋಲು
ಹಿಡಿಯಲೇಬೇಕು…

ಶರಾಯಿಯ ಕಿಸೆಗಳಲ್ಲಿ
ಝಣಗುಟ್ಟುವ ಹಣ
ಇದುವರೆಗೂ
ಹೆಣವಾಗುವದನ್ನು
ತಪ್ಪಿಸಿದ ಒಂದೂ
ಉದಾಹರಣೆ
ಇಲ್ಲ…..

Leave a Reply