ಚಮಚ – ಗಜಿಬಿಜಿ – ಸ್ಮಾರಕ – ನಿಮ್ಮಿಷ್ಟ

ಚಮಚ – ಗಜಿಬಿಜಿ – ಸ್ಮಾರಕ – ನಿಮ್ಮಿಷ್ಟ

“ಬೇಂದ್ರೆ ಪುಣ್ಯತಿಥಿಯಂದು
ಬೇಂದ್ರೆ ಸ್ಮಾರಕ ಕಾವ್ಯ ಗಾಯನ
ಕಾರ್ಯಕ್ರಮದ ಆಯೋಜನವಾಗಬೇಕು..
ನಿಮ್ಮದೇ ಜವಾಬ್ದಾರಿ ನಿಮ್ಮದೇ ಇಷ್ಟ..
ಆದರೆ ಕಾರ್ಯಕ್ರಮ ಸ್ಮರಣೀಯವಾಗಬೇಕು.”
ಬಿಸಿಬಿಸಿ ಉಪ್ಪಿಟ್ಟು ಆರಿಸಲು plateನಲ್ಲಿ
ಚಮಚ ಆಡಿಸುತ್ತ ಕುಳಿತ ನನಗೆ bossನ phone..
ಆ…ಊ.. ಅನ್ನುವ ಮೊದಲೇ cutಊ ಆಯ್ತು…

ತಲೆತುಂಬಾ ಗಜಿಬಿಜಿ.. ಧಿಡೀರ್ ಹೇಳಿದರೆ…
ನನ್ನ ಕಡೆ ಮಾಯಾದಂಡವಿಲ್ಲ… ಆದರೆ
Bossಗೆ NO ಕೇಳಿ ಗೊತ್ತಿಲ್ಲ..
ನಾನೂ ಬೇಂದ್ರೆಯವರಂತೆ ಪ್ರಾರ್ಥಿಸಬೇಕಷ್ಟೇ..
ಸ್ಫೂರ್ತಿ ಗಂಗೆ ಯನ್ನ…

“ಇಳಿದು ಬಾ ತಾಯೆ ಇಳಿದು ಬಾ…
ಸತ್ತ ನರಗಳಲಿ ಶಕ್ತಿ ತುಂಬು ಬಾ…
ಮತ್ತ bossನನು ಮಣಿಸೆ ಬಾ…
ಕುತ್ತು ಬಂದಂತೆಯೇ ವಾಪಸ್ ಕಳಿಸ ಬಾ…
ಸುತ್ತು ಜನರೆಲ್ಲರ ಮನವ ತಣಿಸು ಬಾ..
ಬಾರೆ ಬಾ… ಬಾ ಬಾರೆ ಬಾ ಆಆಆಆಆ

Leave a Reply