ತಡಬಡಾಯಿಸು-ಲೇಟೆಸ್ಟು-ತಾಳ್ಮೆ-ಕಾಯ್ದಿರಿಸು

ತಡಬಡಾಯಿಸು-ಲೇಟೆಸ್ಟು-ತಾಳ್ಮೆ-ಕಾಯ್ದಿರಿಸು

ಉದ್ದೇಶ ಪೂರ್ವಕವಾಗಿ,
ಬಹಿರಂಗ ಪಡಿಸದೇ
ಕಾಯ್ದಿರಿಸಿದ ಸುದ್ದಿಯೊಂದನ್ನು
ತಿಳಿಯಲೇಬೇಕೆಂಬ
ಕದನಕುತೂಹಲ
ಲೇಟೆಸ್ಟ trend ಏನೂ ಅಲ್ಲ…

ಹೇಗೊ ದ್ರಾವಿಡ ಪ್ರಾಣಾಯಾಮ
ಮಾಡಿ, ವಿಷಯ ಮೂಲವನ್ನು ಶೋಧಿಸಿ,
ಅದನ್ನು ತಾಳ್ಮೆಯಿಂದ ಹತ್ತಿಕ್ಕಿ
ಇಟ್ಟುಕೊಳ್ಳದ ಚಡಪಡಿಕೆಯಿಂದ
ಇತರರೆದುರು ತಡಬಡಾಯಿಸುವದು
ಯಾರಿಗೂ ಹೊಸದೂ ಅಲ್ಲ…..

Leave a Reply