ತರ್ಕ – ಆತ್ಮವಂಚನೆ – ನಿಂತಲ್ಲೇ ನಿಲ್ಲು – ಅರಮನೆ

ತರ್ಕ – ಆತ್ಮವಂಚನೆ – ನಿಂತಲ್ಲೇ ನಿಲ್ಲು – ಅರಮನೆ

ಜೀವನವೆಂದರೆ
ನಿಂತಲ್ಲೇ ನಿಲ್ಲುವ ನೀರಲ್ಲ…
ಅದು ತುಡಿತ..
ಮಿಡಿತ..
ಒಂದು ಹಿಡಿತ.
ಆಯ್ಕೆ ನಿಮ್ಮದು..

ಜೀವನವೆಂದರೆ
ತರ್ಕವಲ್ಲ…
ವಾಸ್ತವ.. ಇಲ್ಲಿ
ಆತ್ಮವಂಚನೆ
ಇರಬಹುದು..
ಆತ್ಮಸಾಕ್ಷಾತ್ಕಾರವೂ
ಇದೆ…
ಆಯ್ಕೆ ನಿಮ್ಮದು..

ಜೀವನವೆಂದರೆ ಕೆಲವರಿಗೆ
ಅರಮನೆಯ ಸುಪ್ಪೊತ್ತಿಗೆ
ಇರಬಹುದು…
ಆದರೆ ಕಾಡುಗಳಲ್ಲೂ
ಸುಂದರ ಬದುಕಿದೆ..
ಅರಮನೆ ತೊರೆದು
ಕಾಡು ಸೇರಿದವರಿದ್ದಾರೆ…
ಆಯ್ಕೆ ನಿಮ್ಮದು…

Leave a Reply