ತಾಳ – ಸೊಂಟ – ಕಿತ್ತಳೆ – ಅವಮಾನ

ತಾಳ – ಸೊಂಟ – ಕಿತ್ತಳೆ – ಅವಮಾನ

ನನಗೆ ‘ಸಿಂಹಕಟಿ’ ಅನಿಸಿಕೊಳ್ಳುವ
ಹಂಬಲವೇನೂ ಇಲ್ಲ….
ಹೆಚ್ಚು ತೂಕ ಅವಮಾನ
ಎಂದೂ ಭಾವಿಸಿದವಳಲ್ಲ….
ಅದಕ್ಕೆಂದೇ ವಿಪರೀತ ವ್ಯಾಯಾಮ,
ಯೋಗ, ಜಿಮ್ ಅಂತೆಲ್ಲ
ತಲೆಗೇರಿಸಿಕೊಂಡು ರಸ
ಹಿಂಡಿತೆಗೆದ ಕಿತ್ತಳೆಯಾಗಲೊಲ್ಲೆ..
ಆದರೂ ಸೊಂಟದಳತೆ ಕಡಿಮೆಯಾದಷ್ಟೂ
ಕೆಳಗಿನ ಕಾಲುಗಳಿಗೆ ಕ್ಷೇಮ
ಎಂಬ ಎಚ್ಚರವಿದ್ದುದರಿಂದ
ಮೈತೂಕ ತಾಳತಪ್ಪಬಾರದು,
ಗಡಿಯಾರದ ಲೋಲಕದಂತೆ
ನಡೆಯುವಾಗ ಎಡ-ಬಲಕ್ಕೆ
ವಾಲುವಂತಾಗಬಾರದೆಂಬ
ಏಕಮೇವ ಕಾರಣಕ್ಕೆ
ಸದಾ ಒಂದಿಲ್ಲೊಂದು ಚಟುವಟಿಕೆಗಳಲ್ಲಿ
ತೊಡಗಿಕೊಳ್ಳುತ್ತೇನೆ…

Leave a Reply