ತಿಪ್ಪರಲಾಗ – ತನುಮನ – ಸಾಧಾರಣ – ಪ್ರಕಟಣೆ

ತಿಪ್ಪರಲಾಗ – ತನುಮನ – ಸಾಧಾರಣ – ಪ್ರಕಟಣೆ

“ತನುಮನಧನದಿಂದ ಸಹಾಯ
ಮಾಡಬೇಕಾಗಿ ವಿನಂತಿ.”

ಅದೊಂದು ಸಾಧಾರಣ ಪ್ರಕಟಣೆ…
ಬಡಮಕ್ಕಳ ದಯನೀಯ ಸ್ಥಿತಿಯ
ಕರುಣಾಜನಕ ಫೋಟೋ ಬೇರೆ..

ಪ್ರತಿಕ್ರಿಯೆ ಅಸಾಧಾರಣವಾಗಿತ್ತು..
ಎಲ್ಲೆಡೆಯಿಂದಲೂ ನೆರವಿನ ಮಹಾಪೂರ..
ಹೆಚ್ಚು ಹೆಚ್ಚು ಸಂಗ್ರಹಿಸಲು
ಸಂಯೋಜಕರ ತಿಪ್ಪರಲಾಗ…
ಲಕ್ಷಗಟ್ಟಲೇ ಸಂಗ್ರಹವಾದಮೇಲೆ
ಸಂಯೋಜಕರ campನ ಎತ್ತಂಗಡಿ…

ಬಡಮಕ್ಕಳಿಗೆ ತಿಳಿಯಲೇ ಇಲ್ಲ
ಇವರ ಭಾನಗಡಿ..

Leave a Reply