ತುಡಿತ

ತುಡಿತ

“ನಾ ಏನನ್ನಾದ್ರೂ ಬರಿಲೇಬೇಕು
ಏನ್ ಬರೀಬೇಕಂತೆಳು…
ತಲೆಲ್ ತುಂಬಾ traffic jam
ಇನ್ನೂ ಸ್ವಲ್ಪೊತ್ತು ತಾಳು”

ಹೀಗೆ ಹೇಳಿ ಸುಮ್ನೆ ಕೂಡ್ಸಿ
ತಲೆಗೆ ಹಿಡಿಯುತ್ತೆ ತುಕ್ಕು…
ಹಂಗಂಥೇಳಿ ಇಲ್ಸಲದ್ ಬರದ್ರೆ
ಅದೂ ಒಂದ್ರೀತಿ ಸೊಕ್ಕು…

ತಲೆಲ್ ಸುತ್ತೋ ವಿಚಾರಾಂದ್ರೆ
ಹೊಟ್ಟೇಲ್ ಕೂಸಿದ್ಧಾಗೆ…
ಸಾಕಷ್ಟ್ ನೋವು ಕೊಟ್ಟಾಗೆನೇ
ಅದ್ಕೊಂದ್ ನೆಲೆ ಸಿಕ್ಕಾಗೆ …

ನಮ್-ನಿಮ್ ಮರ್ಜಿಗ್ ಬಗ್ಗೋದಲ್ಲ
ನಾವ್ ಬರೀಬೇಕನ್ನೋ ಮಾತು …
ಕೈಗೆ ಸಿಕ್ಕಾಗ್ ಕಟ್ಟ್ಯಾಕ್ ಬೇಕು
ಇಲ್ದಿದ್ರೆ ಹೋಗ್ತೇವ್ ಸೋತು …

Leave a Reply