ತೊಗರಿಬೇಳೆ – ಮೈಸೋಪು – ಕಾಫಿಪುಡಿ – ಶ್ಯಾಂಪೂ

ತೊಗರಿಬೇಳೆ – ಮೈಸೋಪು – ಕಾಫಿಪುಡಿ – ಶ್ಯಾಂಪೂ
ಸ್ವಗತ…
ಡಿಸೆಂಬರ್ ಇನ್ನೇನು ಆರಂಭ..
ಮೈಗೆ ಸೋಪು ಒಳ್ಳೆಯದಲ್ಲ…
ಚರ್ಮ ಬಿರಿಯುತ್ತೆ… Listನಿಂದ
ತೆಗೆಯುವದೇ ಸರಿ….
ತೊಗರಿಬೇಳೆ ಸ್ವಲ್ಪ ಇಳಿದಿದೆ…
2 kg ಸಾಕು… next…?
Shampoo,….. ಮೊನ್ನೆ ಪ್ರವಾಸ ಹೋದಾಗ
hotelನಿಂದ ತಂದ 3 ಚಿಕ್ಕ ಸ್ಯಾಸೆಗಳಿವೆ…
ತಿಂಗಳ ಕೊನೆಯಲ್ಲಿ ಬೇಕಾದರೆ ಒಂದೋ
ಎರಡೋ ತಂದರಾಯಿತು…
ಬೇಕೇಬೇಕೆಂಬುದೆಂದರೆ…..
ಕಾಫೀ ಪುಡಿ ……ಈಗೀಗ
ಬಿಡಬೇಕೆಂದಷ್ಟೂ ಚಳಿಗೆ ಜಾಸ್ತಿಯೇ
ಆಗುತ್ತಲಿದೆ… ಸ್ವಲ್ಪ ಹೆಚ್ಚೇ ಬೇಕು….
ಮತ್ತೆ….. ಮತ್ತೆ…..??? ಓ ಇಲ್ಲಪ್ಪ…
ಮೊದಲು ಹತ್ತಿರ ಎಷ್ಟು change ಇದೆ
ನೋಡಿಕೊಳ್ಳಲೇ ಬೇಕು…
ಕೆಲದಿನ bank, ATM ಗಲಾಟೆ
ತಗ್ಗುವವರೆಗಾದರೂ ಎಚ್ಚರ ಅಗತ್ಯ..
ಅಲ್ಲಿಯವರೆಗಾದರೂ ಚಿಲ್ಲರೆ
ಕಾಯ್ದಿಟ್ಟುಕೊಳ್ಳಬೇಕು ನಿತ್ಯ……

Leave a Reply