ದಾರುಣ – ಬಡಗಿ – ಲಾಯ – ಪಾಳೆಯ

ದಾರುಣ – ಬಡಗಿ – ಲಾಯ – ಪಾಳೆಯ

ಯುದ್ಧದಲ್ಲಿ ದಾರುಣವಾಗಿ
ಗಾಯಗೊಂಡು ಲಾಯವನ್ನು
ಕಾಯಂ ಆಗಿ ಸೇರಿದ
ಕುದುರೆಯಂತಾಗಿದೆ
ಈ ಮನಸ್ಸು…

ಯಾವದಾದರೂ
ಪಾಳೆಯಗಾರ
ಕರುಣೆತೋರಿ
ಆರೈಕೆಮಾಡಿ
ಎದ್ದುನಿಲ್ಲುವಂತೆ
ಮಾಡುತ್ತಾನೋ ..
ಇಲ್ಲ………

ಕಟುಕ ಬಡಗಿಯೊಬ್ಬ
ಪುನಃ ಏಳದಂತೆ
ಉತ್ಸಾಹ , ಶಕ್ತಿಗಳಿಗೆ
‘ಕೊನೆಯಮೊಳೆ’
ಹೊಡೆಯುತ್ತಾನೋ
ಆತಂಕ
ನನಗೆ..

Leave a Reply