ಧಗೆ ಬೇಸಿಗೆ

ಕಿರು, ಹುಸಿ, ಮಳ್ಳುನಗು ನಗುತಿದ್ದ ನೇಸರ
ಧಗೆ ಹೇಗಿದೆಯೆಂದೊಮ್ಮೆ ಕಣ್ಕಿಸಿದ

ಇದೇನು ಮಹಾ ಧಗೆಯೇ?
ಇದಕಿಲ್ಲ ಬೇಗುದಿಗಳ ಕಾವು
ದುಃಖದುರಿ ದಾವಾನಲ
ಹೊರಧಗೆ ತಣಿಸಲು
ಸಾಕಷ್ಟಿವೆ ಸಾಧನ,
ರಜನಿಯ ಕೃಪೆಯೂ ಇದೆ.

ತಿಳಿದಿದ್ದರೆ ಹೇಳಯ್ಯಾ
ಓ ಸವಿತೃವೇ,
ದುಃಖ ಬೇಗುದಿಗಳ ತಣಿಸೆ
ಸಾಧನವದೇನುಂಟು

ಸುತ್ತುವ ನವಗ್ರಹಗಳ ಬಳಿ
ವಿಚಾರಿಸಿ ತಿಳಿಸು

Leave a Reply