ಧನ್ಯವಾದ

ಧನ್ಯವಾದ

ಅರವತ್ತಾಗ್ಲಿ… ಎಪ್ಪತ್ತಾಗ್ಲಿ…
ಅದು ಬಿಡ್ರಿ ಬರೀ ಲೆಕ್ಕಾ…
ಇಷ್ಟೊಂದ್ ಜನಾ ಹಾರೈಸಿಬಿಟ್ರಿ…
ಹೂಟ್ಟಬ್ಬಾಯ್ತು ಬಲು ಚೊಕ್ಕಾ…

ಏಟೊಂದ್ ಪ್ರೀತಿ… ಎನೊಂದ್ ಅಕ್ರೆ…
ಹೀಗೇ ಬದುಕೆಲ್ಲಾ ಸಿಕ್ರೆ…
ಮಧುಮೇಹಿದ್ರೂ ತಿಂದ ಬಿಡಬೋದು…
ಒಂದೊಡ್ ಬೊಗಸೆ ಸಕ್ರೆ…

ಸಾವಿರಾ ಕೊಟ್ರೂ… ಸಾವಿರ ಕೊಂಡರೂ…
ಪ್ಯಾಟಿಲ್ ಸಿಗೋಲ್ಲ ಪ್ರೀತಿ…
ಎದೆಗೂಡಲ್ಲಿಟ್ಟು ಗುಟುಕು ಕೊಟ್ಟು…
ಕಾಯಬೇಕ್ ಗುಬ್ಬಚ್ಚಿ ರೀತಿ…

Leave a Reply