ನಿತ್ಯ-ಮಿಣುಕು-ರಸ್ತೆ-ಥರ್ಟಿ
ಮಿಣುಕು ದೀಪಗಳ
ರಸ್ತೆಯಲ್ಲಿ
ತೂರಾಡುತ್ತ
ಮನಕ್ಕೆ ಬಂದದ್ದು
ಒದರುತ್ತ ಬರುವದು
ಅವನ ದಿನನಿತ್ಯದ
ಕರ್ಮ..
ವಯಸ್ಸಿನ್ನೂ
Thirty ಇಲ್ಲ
ಆಗಲೇ ಎಲ್ಲ dirty
ಹವ್ಯಾಸಗಳನ್ನು
ಅವ ಬಲ್ಲ…..
“ಅಪುತ್ರಸ್ಯ ಗತಿರ್ನಾಸ್ತಿ”
ಗಂಡೇ ಬೇಕೆಂದು
ಹಂಬಲಿಸಿ ಹಾರೈಸಿ
ಪಡೆದ ಮಗನಿಂದ
ಜೀವಂತವಿದ್ದಾಗಲೇ ತಂದೆ ತಾಯಿಗಳು
‘ಗತಿ’ಗಾಣಬೇಕಲ್ಲ…
You must log in to post a comment.