ಪಾತಾಳ – Google street – ದಾರಿತಪ್ಪಿ – ಮೂರೇ ಮೀಟರ್

ಪಾತಾಳ – Google street – ದಾರಿತಪ್ಪಿ – ಮೂರೇ ಮೀಟರ್

ಅತಳ, ವಿತಳ, ಪಾತಾಳ,
ರಸಾತಳ ಲೋಕಗಳ ಬಗ್ಗೆ
ಪೌರಾಣಿಕ ನಾಟಕಗಳಲ್ಲಿ
ಪುರಾಣ ಪ್ರವಚನಗಳಲ್ಲಿ
ಕೇಳಿ ಗೊತ್ತು—

Google street ನಲ್ಲಿ
ಹೊಕ್ಕು ದಾರಿತಪ್ಪಿ
ಹೊರಬರಲಾರದೇ
ಒದ್ದಾಡುವವರ ಸಂಖ್ಯೆ
ದಿನದಿನಕ್ಕೆ ಹೆಚ್ಚುತ್ತಿದೆ—
ನೋಡಿ ಗೊತ್ತು—

ಮೂರು ಮೂರುಮೀಟರಿಗೊಂದು
ಸಿಗುವ pub, bar ಗಳಲ್ಲಿ
ಯುವಮಾಂಸ ಹಸಿ ಹಸಿಯಾಗಿ
ಬೆಂದು ಹದ್ದುಗಳ ಹಸಿವು
ನೀಗಿಸಲು ಬಿಕರಿಯಾಗುತ್ತದೆ…
ಓದಿ ಗೊತ್ತು—

ಮುಂದೆ…..ಮುಂದೆ ಏನು???!!!
ಯಾರಿಗೂ ಗೊತ್ತಿಲ್ಲ…..

ಪ್ರವಾಹದ ಮಧ್ಯೆ ಸಿಲುಕಿದ್ದಾಗಿದೆ… ಸ್ವಂತ ಬಲದ ಮೇಲೆ
ದಡಹಾಯುವದೋ… ಸುಳಿಗೆ ಸಿಲುಕಿ ತಳ ಸೇರುವದೋ
ಕಾಲವೇ ನಿರ್ಧರಿಸಬೇಕು…

Leave a Reply