ಪಾದ – ನಾಟಕ – ಸುರಂಗ – ಸಣ್ಣ ಹೂಗಳು

ಪಾದ – ನಾಟಕ – ಸುರಂಗ – ಸಣ್ಣ ಹೂಗಳು

ಅದೊಂದು ದ್ರಶ್ಯಕಾವ್ಯ
ಅವಳೊಬ್ಬ ಪುಟ್ಟ ಗೌರಿ
ಅಮ್ಮನ ತೊಡೆಯೇರಿ
ಆಡುತ್ತಿದ್ದವಳು
ಇಳಿದಳೊಂದುದಿನ…

ಅವಳದದು
ಮೊದಲ ಹೆಜ್ಜೆ…
ಮಾನವ ಚಂದ್ರನ
ಮೇಲಿಟ್ಟ, ಗೌರಿಶಂಕರದ
ಮೇಲಿಟ್ಟ ಮೊದಲಹೆಜ್ಜೆಯಷ್ಟೇ
ರೋಮಾಂಚಕ…
ಐತಿಹಾಸಿಕ….
ನಮ್ಮೆಲ್ಲರ ಪಾಲಿಗೆ…

ಪುಟ್ಟ ಪುಟ್ಟ ಪಾದ
ಗೆಜ್ಜೆಗಳ ಘಿಲ್ ಘಿಲ್ ನಾದ
ನಡುನಡುವೆ ನಾಟಕ ಸೀನು
ಬಿದ್ದು ಎದ್ದಂತೆ..ಎದ್ದು ಬಿದ್ದಂತೆ…
ಸುರಂಗದಲ್ಲಿ ತೆವಳುವಂತೆ
ನಡುನಡುವೆ ಅಳುವಂತೆ…

ಎಲ್ಲವೂ ಅವಳ
ಸಣ್ಣ ಸಣ್ಣ ಹೂಗಳ ಫ್ರಾಕಿನಷ್ಟೇssssssssss
ಸುಂದರ.. ವರ್ಣಮಯ… ಆನಂದಮಯ..

Leave a Reply