ಪ್ರೀತಿ – ಪ್ರೇಮ

ಪ್ರೀತಿ – ಪ್ರೇಮ

ಪ್ರೀತಿ-ಪ್ರೇಮ ಏನೇ ಇದ್ರೂ
‘ಮುಚ್ಚಿದ ಮೊಗ್ಗಿದ್ಧ್ಹಾಗೆ’
ತಾನೆ ತಾನು ಅಳ್ರ್ಕೋಬೇಕು
ಆಗಿನ್ ಕಾಲ್ದಾಗ್ ಹಾಗೇ…
ಅಂಥಾದ್ದೆಲ್ಲಾ ಈಗೇನಿಲ್ಲ
ಎಲ್ಲಾ ಬಟಾ ಬೈಲೂ…
ಪ್ರೇಮಾ ತೋರ್ಸೋಕೂ
ಒಂದಿನ ಬೇಕು-ಇಡೀ ದಿನಾ ಹುಯಿಲು…
ಯಾರದೂ ತಪ್ಪು ಅನ್ನೊಂಗಿಲ್ಲ
ಒಬ್ಬೋಬ್ರುದು ಒಂದೊಂದ್ ರೀತಿ…
ಬದಲಾದ್ ಕಾಲದ್ ಜೊತೆ-ಜೊತೆಗೇನೆ
ಬದಲಾಗ್ಬಾರ್ದು ಪ್ರೀತಿ…
ಪ್ರೀತಿ ಅಂದ್ರೆ ಎದೆಗೂಡಲ್ಲಿ
ಬೆಂಚ್ಚ್ಗಿಂದೊಂದು ಭಾವ…
ತೋರ್ಕೆ ಇದ್ರೂ ಮಿತವಾಗಿರ್ಲಿ
ಹಿತವಾಗಿರ್ಲಿ ಜೀವಾ…

Leave a Reply