ಪ್ರೇಮಾಲಾಪ

ಪ್ರೇಮದಾಳವ ಹೇಗೆ ತಿಳಿಸಲಿನಾ ನಿನಗೆ ಪ್ರಿಯೆ
ಸೌಂದರ್ಯವ ವರ್ಣಿಸಲೆ? ನೀ ತಿಳಿಯದುದದೇನಿದೆ

ಗುಣವ ಹೊಗಳಲೆ? ನಿನ್ನ ಹೋಲಿಸಲದಾವುದಿದೆ
ನಿನ್ನ ನುಡಿಗಳೋ ನನ್ನ ಮಾತನ್ನೇ ಮರೆಸಿದೆ
ನಗುವು ನಿನ್ನ ಸಪ್ತಸ್ವರದ ಗಾನ ಲೋಕಕೆಳೆದಿದೆ
ನಿನ್ನ ಹಾಡದನಿಗೆ ನಾಚಿ ಕೋಗಿಲೆ ತಾನಡಗಿದೆ

ನೀರೆ ನಿನ್ನ ನಡೆಯು ನನಗೆ ನಾಟ್ಯೋತ್ಸವವಾಗಿದೆ
ನಿನ್ನೊಲವಿನ ನೋಟಕೆನ್ನ ಹೃದಯ ಕರಗಿ ಹರಿದಿದೆ
ಸುಮಗಳೆಲ್ಲ ಕೋಮಲತೆಯ ನಿನಗೆ ಧಾರೆ ಎರೆದಿವೆ
ಮಂದಸ್ಮಿತ ವದನ ಚಂದಮಾಮನನ್ನು ಮರೆಸಿದೆ

ಸುಳಿದಾಡಲು ತಂಗಾಳಿಯು ಪರಿಮಳವನು ಸೂಸಿದೆ
ಮಾತುಮುಗಿದು ಮೂಕನಾದೆ ನಗೆಚೆಲ್ಲಲು ತರುಣಿಯೆ

Leave a Reply