ಪ್ರೇರಣೆ

1. ಚುಟುಕು
ಉದ್ದುದ್ದ ಕವಿತೆಗಳ ಅಡ್ಡಡ್ಡ ಸೀಳಿ
ನಾಲ್ಕು ಸಾಲುಗಳಲ್ಲೆ ಹೆಳುವುದ ಹೇಳಿ
ಚುಟುಕಾಗಿ ಬರೆಯುವದೇ ಅನಿಸುವುದು ಸೂಕ್ತ
ಬರೆಯಿವವ, ಓದುವವ ಬಲು ಬೇಗ ಮುಕ್ತ

2. ಪ್ರೇರಣೆ
ಚುಟುಕಗಳ ಓದುತ್ತ ಬೆಳೆದವಳು ನಾನು
ದೇಸಾಯಿ ದಿನಕರರ ಬಹುದೊಡ್ಡ ಫ್ಯಾನು
ಅವರದೇ ಹಾದಿಯಲಿ ಒಂದು ಕಿರು ಹೆಜ್ಜೆ
ಚುಟುಕು ಕಲಂದುಗೆಯ ಒಂದು ಬಿಡಿಗೆಜ್ಜೆ

Leave a Reply