ಬಣ್ಣನೆ – ಚರಿತ್ರೆ – ಬಣವೆ – ಪ್ರೇಮ

ಬಣ್ಣನೆ – ಚರಿತ್ರೆ – ಬಣವೆ – ಪ್ರೇಮ

ಪುಟ್ಟ ಪುಟ್ಟ ಹಳ್ಳಿಗಳಲ್ಲಿ
ಬಣವೆಗಳ ಹಿಂಬದಿಯಲ್ಲಿ
ಪ್ರೇಮ ಪಲ್ಲವಿಸಿ
ಪೋಷಣೆಯಿಲ್ಲದೇ
ಕಮರಿದ ಕಥೆಗಳೆಷ್ಟು
ಚರಿತ್ರೆ ಸೇರಿವೆಯೋ
ಲೆಕ್ಕ ಇಟ್ಟವರಾರು…..??

ಶಾರೂಖ – ಕಾಜೋಲ
ರಣಬೀರ್ – ಐಶ್ವರ್ಯ
ಕಥೆಗಳಂತೆ ಕೋಟಿ
ಕೋಟಿ ಬಾಚಲಾರದ,
ಬಣ್ಣನೆಗೆ ‘ಬರ’ವಿರುವ,
ಕಥೆಗಳಿಗೆ ‘ಕರಣ’ (ಜೋಹರ್)
ನಂಥವರ ಕರುಣೆ ದಕ್ಕುವದು
ಬಣವೆಯಿಂದ ಸೂಜಿ
ಹುಡುಕಿ, ಹೆಕ್ಕಿ ತೆಗೆದಂತೆ…..

Leave a Reply