ಮಂಗಳವಾರ – ಮನೆಗೆಲಸ – ಹಾಸಿಗೆ – ಸರಳು

ಮಂಗಳವಾರ – ಮನೆಗೆಲಸ – ಹಾಸಿಗೆ – ಸರಳು

“ನಾಳೆ ಮಂಗಳವಾರ,
ಮಾರನೆಯ ದಿನ
ನವಮಿ.. ಆಮೇಲೆ
ನಿಲ್ಲುವೆನೆ ನಾನು ಇಲ್ಲೆ….”

ಮೈಸೂರು ಮಲ್ಲಿಗೆಯ
ಪದ್ಮಳಂತೆ ಪತ್ರದಲ್ಲಿಯೇ
ಲಲ್ಲೆಗರೆದು ಮತ್ತೆರಡು ದಿನ
ಗಿಟ್ಟಿಸಿಕೊಂಡಿದ್ದಾಳೆ ನನ್ನ ರಾಣಿ…

ನನಗೋ ಉಭಯ ಸಂಕಟ.
ಬೇಡವೆಂದರೆ ಅವಳ ಮುನಿಸು..
ಒಪ್ಪಿದರೆ ಹಾಸಿಗೆ ಸುತ್ತುವದರಿಂದ
ಹಿಡಿದು ಎಲ್ಲ ಮನೆಗೆಲಸ ನನ್ನದೇ..

ಬೆಂಕಿ ಬೇಕಾ? ಬಾಣಲೆ ಬೇಕಾ?

ತವರಿನ ರಜೆ ವಿಸ್ತರಿಸಿ
ದೊಡ್ಡವನಾಗುವದೇ
ಹಿತ.. ಆಮೇಲೆ ಇದ್ದೇ ಇದೆ..
ಬಾಗಿಲು ಸರಳು ಹಿಡಿದು
ಈಗ ಬಂದಾಳೆಯೇ? ಆಗ ಬಂದಾಳೆಯೇ
ಎಂದು ಕಾಯುತ್ತಾ ನಿಲ್ಲುವದು…

Leave a Reply