ಮಹದಾಸೆಯ ಕನಸುಗಳು

ಮನದಾಳದಿ ಬಿತ್ತು ಮಹದಾಸೆಯ ಕನಸುಗಳ
ಕಷ್ಟವಿದೆನ್ನದೆ ಬೆಳೆಸಿಕೊಧೈಯ೯ ಸಾಮಥ್ಯ೯ಗಳ
ನಿನ್ನಲ್ಲಿದ್ದರೆ ಪ್ರತಿಭೆ ಕೌಶಲಸರಿಯಾಗಿ ಬಳಸುವ ಛಲ
ದೊರಕದೇಕೆ ನಿನಗೆ ಪರಿಶ್ರಮದ ಫಲ

ಕನಸುಗಳ ನೀ ಕಟ್ಟು
ಪ್ರಯತ್ನವಿರಲಿ ಜಾಸ್ತಿಯೇ ಒಂದಿಷ್ಟು
ವ್ಯಕ್ತಿತ್ವ ವಿಕಸನದ ಗುರಿಯಿಟ್ಟು
ಅರಳಿಸಿಕೊ ವ್ಯಕ್ತಿತ್ವ
ಶಿಸ್ತು ಬಧ್ದತೆಯ ಸತ್ವ
ಗುರಿ ಏಕಾಗ್ರತೆ ಪಕ್ವ

ಮಹದಾಸೆ ನೆಗೆಯಲು ನಭಕೆ
ಧ್ರಡ ನಿಶ್ಚಯವೊಂದೆ ಬಾಕಿ
ಕೀಳರಿಮೆಯ ಮೋಡಗಳ ಕೆಳಗೆ ನೂಕಿ
ಇರಲಿ ಸ್ರಜನಾತ್ಮಕ ಯೋಚನೆ
ಜ್ಞಾನ ಭರಿತ ವಿಶ್ವಾಸದ ನಿವ೯ಹಣೆ
ಎಂದಿಗೂ ಅನಿಸದು ನಿನಗೆ
ಜೀವನ ಒಂದು ಬವಣೆ.

Leave a Reply