ಮಾಗಿ –ಕಂಬನಿ – ನಿತ್ಯ – ಅಸ್ತವ್ಯಸ್ತ

ಮಾಗಿ –ಕಂಬನಿ – ನಿತ್ಯ – ಅಸ್ತವ್ಯಸ್ತ

ಅಸ್ತವ್ಯಸ್ತ
ಬದುಕಿನ
ಶೈಲಿಯಿಂದಾಗಿ
ನಿತ್ಯ ಕಂಬನಿ-
ಗರೆಯುತ್ತಿದ್ದ
ಅವನೀಗ
ಬಾಳ ಕುಲುಮೆಯಲ್ಲಿ
ಮಾಗಿ,
ಪಕ್ವಗೊಂಡು
ಆಗಿದ್ದಾನೆ
ಚೊಕ್ಕ
ಅಪರಂಜಿ…
ನೋಡತೊಡಗಿದ್ದಾನೆ
ಬದುಕನ್ನು
ಹಿಂಜಿ…ಹಿಂಜಿ…
ಇಳಿವಯಸ್ಸಿನ
ಅವನ ಬಾಳೀಗ
ವರ್ಣಮಯ
ಮುಸ್ಸಂಜೆ…..

Leave a Reply