ಯಕ್ಷಿಣಿ – ಗಂಟಲು – ಬೆದರಿಕೆ – ಚಿಂತಾಜನಕ

ಯಕ್ಷಿಣಿ – ಗಂಟಲು – ಬೆದರಿಕೆ – ಚಿಂತಾಜನಕ

ಕನಸಿನ ರಾಜಕುಮಾರ
ಖಂಡಿತ ಬರುತ್ತಾನೆ…
ಮಾಯಾ ಕುದುರೆಯಮೇಲೆ
ಕೂಡಿಸಿಕೊಂಡು
ಯಕ್ಷಿಣಿಯರ ಲೋಕಕ್ಕೆ
ಕರೆದೊಯ್ಯುತ್ತಾನೆ
ಎಂದೆಲ್ಲ ಕನಸು
ಕಂಡವಳದು ಈಗ
ಚಿಂತಾಜನಕ ಸ್ಥಿತಿ…

ಅತ್ತೂ. ಅತ್ತೂ
ಗಂಟಲು ಕಟ್ಟಿದೆ…
ಸದಾ ಯಾರದೋ
ಬೆದರಿಕೆ ಭಯದಲ್ಲಿ
ಮುದುರಿ ಹಿಡಿಮುಷ್ಟಿಯಾಗಿ
ಮೂಲೆ ಸೇರಿ
ಶೂನ್ಯ ನಿಟ್ಟಿಸುತ್ತ ಏನೋ
ತನ್ನಷ್ಟಕ್ಕೇ ತಾನೇ
ಗೊಣಗುತ್ತಾಳೆ…

Leave a Reply