ರಜೆಯೋ ರೆಜೆ

ರಜೆಯೆನಗೆ ರಜೆಯೆನಗೆ
ರಜೆಯ ನಗೆ ಹೊಮ್ಮಿದೆ
ಹೇಗೆ ಉರುಳಿತೊ ಗಂಟೆ
ರಜೆ ಮುಗಿದುಹೋಗಿದೆ

ಕೇಶ ತೀಡುವುದಿತ್ತು
ಬಣ್ಣ ನೀಡುವುದಿತ್ತು
ಅಂಗಡಿಗೆ ಹೋಗಲು
ಬೇಸರವು ಬಂದಿತ್ತು

ಹೇಗೊ ಸಾವರಿಸಿ ನಾ
ಕ್ಷೌರಿಗೆ ತಲೆಬಾಗಿ
ಬಂದು ಮಜ್ಜನ ಮಾಡೆ
ಹೊಟ್ಟೆ ಹಸಿದಿತ್ತು

ಸದ್ದಿರದ ಅಡಿಗೆಮನೆ
ಅದರೊಡತಿಯಾ ರಜೆಗೆ
ತುಂಬು ಮೌನದೆ ಇಂದು
ಮಂಕಾಗಿ ಕಂಡಿತ್ತು

ಹತ್ತಿರದ ಹೋಟೆಲಿನ
ಇಡ್ಲಿವಡೆ ಬಂದಾಯ್ತು
ಕಾಪಿಮಾಡುವ ಕೆಲಸ
ನನಗೆಂದೆ ಕಾದಿತ್ತು

Leave a Reply