ರವಿಯ ಉತ್ತರ

ರವಿ:

ದುಃಖ ಬೇಗುದಿ ದುಮ್ಮಾನ ಕಳೆಯಲು
ಸುತ್ತುವಿರಿ ನವ
ಗ್ರಹಗಳನು ನೀವು,

ನಿಮ್ಮೆಲ್ಲ ದೂರುಗಳ
ಹೊತ್ತು ತಿರುಗುವ ಗ್ರಹರು
ತಿರುಗುತ್ತ ಎಲ್ಲವನು
ದಾಟಿಸುವರೆನಗೆ

ನನ್ನುರಿವಿಗದೇ ತಿರುಳು
ಒಡಲೆಲ್ಲ ಸುಡುಸುಟ್ಟು
ಬರಿದಾಗುತಿದೆ ನನ್ನೊಡಲು,

ನಿಮ್ಮೆಲ್ಲ ಬೇಗುದಿಗೆ
ನಿಮ್ಮೊಳಗೆ ಅಸ್ತ್ರವಿದೆ!

ಸರಿಸಿರೆಲ್ಲ ಮನದಿಂ
ಬೇಡದ ವಿಚಾರಗಳ
ಬಿಡಿ ಅದರಷ್ಟಕೆ
ಆಗುವುದಾಗಲು
ಸುಮ್ಮನಿದ್ದುಬಿಡಿ,
ಹೋಗದಿರಿ
ಆಗದುದ ಮಾಡಲು.

ಸುಮ್ಮನಾಗಲು ಮನವು
ಗಮ್ಮೆಂದು ಹರಡುವುದು
ಸುಖ ಶಾಂತಿ ನೆಮ್ಮದಿಯ
ತಂಪು ಘಮಲು

Leave a Reply