ವಿಡಂಬನೆ

ವಿಡಂಬನೆ

ಹೆಣ್ಣು ಬೇಡವೆಂದು
ಮೂರೂ ಬಾರಿ
ಭ್ರೂಣ ತೆಗೆಸಿದ…
ನಾಕನೇಬಾರಿ
ಮಗ ಹುಟ್ಟಿದ
ಚನ್ನಾಗಿ ಉಂಡ… ಗುಂಡಗಾದ …
ಉಂಡಾಡಿ ಗುಂಡನಾದ…
ಈಗ ಕೆಲಸಕ್ಕೆ
ಬಾರದ ಮಗನಿಗಾಗಿ
ಅದೇ ಅಪ್ಪ ಕಂಡ ಕಂಡವರಿಗೆ
ಮೊರೆಯಿಡುತ್ತಿದ್ದಾನೆ
“ನನ್ನ ಮಗನಿಗೊಂದು
ಹೆಣ್ಣು ಕೊಡಿ!”

Leave a Reply