ವೈರಾಗ್ಯ ರಹಸ್ಯ

(ರಸನ=ನಾಲಗೆ)

ಸಾರ ಸಂಸಾರದಾ
ಸವಿದಿರುವೆ ಮೋದದಿ
ಸಾಸಿರವು ಸಾರವು
ಹಲವಿಹವು ರಸನವು

ಮನಕುಂಟು ರಸನ
ತ್ವಚೆಗುಂಟು ರಸನ
ಕಿವಿಗುಂಟು ರಸನ
ನಾಸಿಕಕು ರಸನ
ಕಣ್ಗಳಿಗೂ ಇಹುದು
ಮತ್ತೊಂದು ರಸನ
ಉದರದಾ ಸ್ನೇಹಿತನು
ಬಾಯಲಿಹ ರಸನ

ಜಗದೆಲ್ಲ ಸಾರಕ್ಕೆ
ದ್ವಾರ ಸಂಸಾರವು
ಸವಿಯಲೊದಗಿದೆ ದೇಹ
ರಸನ ಸೌ ಭಾಗ್ಯವು

ಸಾರತೀರುವುದೋ
ರಸನದಾಮತಿಯು
ಕೆಡುವುದೋ

ಮಾಯೆ ತಿಳಿದವನವನೆ
ವೈರಾಗ್ಯ ವೀರನು

Leave a Reply