ವ್ಯಕ್ತಿತ್ವ

ವ್ಯಕ್ತಿತ್ವ

ಇರಲಿ ನಿನ್ನ ಮೇಲೆ
ನಿನಗೆ ಸ್ವಾವಲಂಬನೆ
ಅತಿಯಾಗಿ ಬೇಡ
ಮಿತಿಯಾಗಿ ಅನುಸರಿಸು
ಬೇರೆಯವರ ಮೇಲೆ ಅವಲಂಬನೆ
ಮಾತಿನಲಿ ಮಿತವಾಗಿರು
ನಯ ವಿನಯವೇ ಭೂಷಣ
ನಿನ್ನ ಘನತೆಗೆ
ಬದುಕಲ್ಲಿ ಮಾರ್ಗವಿರಲು
ಅಚಲ ಗುರಿಯರಲಿ,
ಗುರಿಯನ್ನು ತಲುಪಲು
ಛಲದ ವಿಶ್ವಾಸವಿರಲಿ
ಸಾಧಿಸಿ ತೋರು ಮುಂದೆ ಬಂದು
ಉದ್ಯೋಗ ಮಾಡು ನಿನ್ನದೊಂದು
ಅತಿಯಾದ ಆಸೆ ನೀ ಕಾಣಬೇಡ
ಗಿಂಬಳಕೆ ನೀನು ಕೈ ಚಾಚಬೇಡ,
ಅಧಿಕಾರದ ವ್ಯಕ್ತಿ ನೀ ಮುಂದಾದರೆ
ಮೆರೆಯದಿರು ನೀ ದರ್ಪದಿಂದ
ವ್ಯಕ್ತಿತ್ವವೇ ನಿನಗೆ ಶಕ್ತಿ
ಆಗುವೆ ನಿನೊಮ್ಮೆ ಆದರ್ಶ ವ್ಯಕ್ತಿ.

Leave a Reply