ಸಂಕ್ರಮಣ

ಸಂಕ್ರಮಣ

ಕಹಿ ಎಳ್ಳು-ಸಿಹಿಬೆಲ್ಲ ಎರಡನ್ನೂ ಮೆದ್ದು
ನೋವು- ನಲಿವುಗಳನ್ನು ಸಮಸಮಕೆ ಗೆದ್ದು…
‘ಸಮರಸವೆ ಜೀವನ’ ಎಂಬುದನು ಅರಿತು…
ಹದವಾಗಿ ಬಾಳೋಣ ಕಹಿ ಭಾವ ಮರೆತು…

ನಮ್ಮ ದೇಶಕ್ಕೂ ಇದು ಸಂಕ್ರಮಣ ಕಾಲ…
ಅಯನ ಬದಲಾಯಿಸಲು ಸರಿ ಪರ್ವಕಾಲ…
ಕೊಡವಿ ನಿಲ್ಲಲಿ ಜಾಡ್ಧ್ಯ ಹೊಸ ಸ್ಫೂರ್ತಿ ಪಡೆದು…
ವಿಶ್ವ ಮಾದರಿಯಾಗೆ ಹೊಸ ಮಾರ್ಗದಲಿ ನಡೆದು…

Leave a Reply