ಸಂದಿ – ಪ್ರತಿಮೆ – ಅನುಕೂಲಸಿಂಧು – ರಣವೀಳ್ಯ

ಸಂದಿ – ಪ್ರತಿಮೆ – ಅನುಕೂಲಸಿಂಧು – ರಣವೀಳ್ಯ

ಇಳಿಬಿಟ್ಟ ಪರದೆಗಳ
ಪದರುಗಳಲ್ಲಿ,
ಸಂದಿ ಗೊಂದಿಗಳಲ್ಲಿ,
ಚಂದಕ್ಕಿಟ್ಟ ಪ್ರತಿಮೆಗಳ
ಹಿಂದುಮುಂದು,
ಹಗಲೆಲ್ಲ ಅಡಗಿಕೊಂಡು
ಅನುಕೂಲಸಿಂಧು ನೋಡಿ
ಹೊರಬಿದ್ದು
ಕಂಡಕಂಡ ಹಾಗೆ
ಆಕ್ರಮಣ ಮಾಡಿ
ಕೈಗೆ ಸಿಗದೇ
ಆಟವಾಡಿಸುತ್ತಿರುವ
ಸೊಳ್ಳೆ ದಂಡಿನಮೇಲೆ
ಯುದ್ಧಸಾರಲು
ರಣವೀಳ್ಯಪಡೆದಿದ್ದೇನೆ………
ಏನಕೇನ ಪ್ರಕಾರೇಣ
ಗೆಲುವು ನನ್ನದಾಗಲೇಬೇಕು….
ಪೊಡಮಡುವೆ….
ಆಶೀರ್ವದಿಸಿ…..

Leave a Reply