ಸದ್ಗುರು ಉವಾಚ

ಸದ್ಗುರು ಉವಾಚ

ವರುಷವೊಂದು
ಪುನಹ ಉರುಳುತ್ತಿದೆ…

ಇನ್ನೊಂದು
ಒಳ ಬರಲು
ಕಾಯುತ್ತಿದೆ..

ಈ ವರುಷ
ನೀವು ಬದುಕಿದ್ದೆಷ್ಟು?
(ಸತ್ತಂತೆ ಇದ್ದುದೆಷ್ಟು ????)

ಎಷ್ಟು ಸಲ
ಸೂರ್ಯ – ಚಂದ್ರರನ್ನು
ಪರ್ವತ- ಶರಧಿಗಳನ್ನು
ಆನಂದಿಸಿದ್ದೀರಿ ?
ಹಾರುವ ಚಿಟ್ಟೆಗಳನ್ನು
ಕಂಡು
ನಲಿದಿದ್ದೀರಿ?
ನಿಮ್ಮನ್ನೇಕಂಡು
ನೀವು ನಕ್ಕೀದ್ದೀರಿ?

ಈಗಲಾದರೂ
ಉಳಿದೆರಡು
ದಿನಗಳನ್ನು
ಮುಂಬರುವ
ಹೊಸ
ವರುಷವನ್ನು
ನೀವೇನೀವಾಗಿ
ನಿಜದರ್ಥದಲ್ಲಿ
ಜೀವಿಸಿರಿ

 

Leave a Reply