ಸಮರಸ – ಕುದುರೆ – ವರ್ತಕ – ಬಿಸಿಲು

ಸಮರಸ – ಕುದುರೆ – ವರ್ತಕ – ಬಿಸಿಲು

ಕುದುರೆ ಏರಿ ವರ್ತಕನೊಬ್ಬ
ಪಯಣ ಹೊರಟಿದ್ದಾನೆ…
ನಡುಹಗಲಿನ ರಣಬಿಸಿಲು..
ನಿಂತರೆ ಉಳಿದವರಿಗಿಂತ
ಹಿಂದುಳಿದುಬಿಡುವ ಭಯ…
ಹೊರಟರೆ ನೆತ್ತಿಬಿರಿಯುವ ಅಪಾಯ…
ಒಟ್ಟಿನಲ್ಲಿ ಹುಲಿಮೇಲಿನ ಸವಾರಿ..

ಈಗೀಗ ಎಲ್ಲರ ಬದುಕು ಹೀಗೇ..
ಸಮರಸ ಎಂದೋ ಎಲ್ಲೋ ಕಳೆದುಹೋಗಿದೆ..
ಎಲ್ಲರೂ ಓಡುತ್ತಿದ್ದೇವೆ…
ಓಡಲೇಬೇಕೆಂಬ ಕಾರಣಕ್ಕೆ……
ಏಕೆ? ಹೇಗೆ? ಎಲ್ಲಿಗೆ?
ಎಂಬುದೇ ಗೊತ್ತಿಲ್ಲದೆಯೇ……..

Leave a Reply