ಸುಖಾಂತ್ಯ – ಹೆಚ್ಚು ಕಡಿಮೆ – ಹಿತ್ತಲು – powder ಡಬ್ಬಿ

ಸುಖಾಂತ್ಯ – ಹೆಚ್ಚು ಕಡಿಮೆ – ಹಿತ್ತಲು – powder ಡಬ್ಬಿ

ಹೆಚ್ಚು ಕಡಿಮೆ ಎಲ್ಲ
ನಾಟಕ ಸಿನೇಮಾಗಳು
ಸುಖಾಂತ್ಯಗೊಳ್ಳುವದು
ಅಲಿಖಿತ ಒಪ್ಪಂದವಿದ್ದಂತೆ…
ಕೊನೆಯಲ್ಲಿ ಒಂದು
Group photo
ಇಲ್ಲದೇ The End ಇಲ್ಲ…

ಇದು ನಾವು ಚಿಕ್ಕವರಿದ್ದಾಗಿನ
ಸಿನೇಮಾಗಳು…
ಮನೆಮಂದಿಗೆ ಹೇಳಿ
ಒಂದುಸಲ…
ಹೇಳದೇ ಹಲವಾರುಸಲ
ಹೋದದ್ದೆಷ್ಟೋ ನೆನಪಿಲ್ಲ…

ಬಂದಮೇಲೆ ಹಿತ್ತಲಲ್ಲಿ
ಅಡಗಿ ಮುಖಕ್ಕೆ
ಡಬ್ಬದಲ್ಲಿಯ
Powder ಮೆತ್ತಿಕೊಂಡು
ಕದ್ದು ಕದ್ದು ಕನ್ನಡಿ
ನೋಡಿ ನಾವೇ
ಲೀಲಾವತಿ, ಮೈನಾವತಿ
ಎಂಬಂತೆ ಭ್ರಮಿಸಿ
ಸಂಭ್ರಮಿಸಿದ್ದು…
ಅದೆಷ್ಟು ಸಲವೋ
ಲೆಕ್ಕವಿಲ್ಲ……

ಓಹ್…. ಬಾಲ್ಯದ
ಮುಗ್ಧ ದಿನಗಳೇ
ಒಮ್ಮೆ.. ಕೇವಲ
ಒಮ್ಮೆ ಮಾತ್ರ ಮತ್ತೆ
ಬರಲಾರಿರಾ….??!
ದೇವರಾಣೆ ಇನ್ನೊಮ್ಮೆ
ಕೇಳುವದಿಲ್ಲ….

Leave a Reply