ಸ್ಪರ್ಧೆ

ಸ್ಪರ್ಧೆ

ನಾನು
ಎಂದೂ
ಯಾವುದಕ್ಕೂ
ಯಾರೊಂದಿಗೂ
ಸ್ಪರ್ಧೆಗಿಳಿಯುವದಿಲ್ಲ..

ಯಾರನ್ನೋ
ಸೋಲಿಸಿ
ಸಂಭ್ರಮಿಸುವ..
ಗೆದ್ದು
ವಿಜ್ರಂಭಿಸುವ
ತುಡಿತ
ನನ್ನದಲ್ಲ…

ನನ್ನ ಸ್ಪರ್ಧೆ
ಏನಿದ್ದರೂ
ನನ್ನೊಂದಿಗೆ
ಮಾತ್ರ…

ನಿನ್ನಿನ
‘ನಾನು’ವಿಗಿಂತ
ಇಂದಿನ
‘ನಾನು’
ಉತ್ತಮವಾಗಿ
ಕಂಡರೆ….

ನಾನು
ಜಯದಗುರಿ
ತಲುಪಿದಂತೆ…

(ಒಂದು ಹೇಳಿಕೆ (quote) ಆಧರಿಸಿ …)

Leave a Reply